ಮಕ್ಕಳು ಮತ್ತು ಮಾತೃಭೂಮಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನಮ್ಮದು ಅನಗತ್ಯ ಭಯ, ಆತಂಕ. ನಮ್ಮದೆಲ್ಲವೂ ಕಲ್ಪಿತ ಭಯ ಎಂಬ ಅರಿವು ಕೂಡ ಕೆಲವು ಪೋಷಕರಲ್ಲಿ ಕಂಡು ಬಂತು. ನಮ್ಮ ಆತಂಕ, ಭಯಗಳು ಮಕ್ಕಳ ಭವಿಷ್ಯದ ಜೀವನಕ್ಕೆ ಅಡ್ಡಿಯಾಗಬಾರದು, ನಾವಿಲ್ಲದ ನಾಳಿನ ಬದುಕಿನಲ್ಲಿ ಅವರು ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕೂ ನಮಗಿಲ್ಲ ಅಲ್ಲವೇ ಎಂದು ಪೋಷಕರು ಅವರವರಲ್ಲೇ ಪರಸ್ಪರ ಚರ್ಚಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಈ ಯಾವ ಆತಂಕಗಳೂ ಮಕ್ಕಳಿಗಿಲ್ಲ ಎಂಬ ಅರಿವು ಕೂಡ ಈ ಸಮಾಧಾನದ ಹಿಂದಿದೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿ
ಮೊಮ್ಮಕ್ಕಳಿಂದ ಕಲಿಯುವುದು: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ
ಉಸಿರುಗಟ್ಟಿ ತತ್ತರಿಸುತ್ತಿರುವ ಆಗ್ನೇಯ ಏಷ್ಯಾ ದೇಶಗಳು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ
ನಾವು ಗುಹೆಯಲ್ಲಿ ನಿಂತುಕೊಂಡು ಆಕಾಶದ ಕಡೆಗೆ ನೋಡಿದಾಗ ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಆದರೆ ನಾವು ತೂತುಗಳಿಂದ ದೂರಕ್ಕೆ ನಿಂತಿದ್ದರಿಂದ ನೆನೆಯಲಿಲ್ಲ. ಬಿದ್ದ ನೀರು ಜರೋ ಎಂದು ಸದ್ದು ಮಾಡುತ್ತ ಹರಿದುಹೋಗುತ್ತಿದ್ದರೂ ನಮಗೆ ಕಾಣಿಸಲಿಲ್ಲ. ಸೂರ್ಯನ ಬೆಳಕು ನೇರವಾಗಿ ಗುಹೆಗಳ ಒಳಕ್ಕೆ ಬೀಳುವುದರ ಜೊತೆಗೆ ಮಳೆಗಾಲದಲ್ಲಿ ಅಪಾರವಾದ ಮಳೆ ಗುಹೆಗಳ ಒಳಕ್ಕೆ ಸುರಿಯುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆದ ಮಲೇಷ್ಯಾ ಪ್ರವಾಸದ ಮತ್ತಷ್ಟು ಅನುಭವಗಳು ನಿಮ್ಮ ಓದಿಗೆ
ಮಕ್ಕಳ ಆಟ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನೆದರ್ಲ್ಯಾಂಡ್ಸ್ನ ಮನೆಗಳಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಿದೆ. ಜೊತೆಯಲ್ಲಿ ಆಡಲು ಮಕ್ಕಳು ಸಿಗದೆ ಇರಬಹುದು. ಇದಕ್ಕೆ ಬದಲಾಗಿ, ಪ್ರತಿ ಮನೆಯಲ್ಲೂ ಒಂದೊಂದು ಶಿಶುವಿಹಾರಕ್ಕೆ ಆಗುವಷ್ಟು ಆಟದ ಸಾಮಾನುಗಳು, ಎಲೆಕ್ಟ್ರಾನಿಕ್ ಉಪಕರಣಗಳು ತುಂಬಿ ತುಳುಕುತ್ತಿರುತ್ತವೆ. ಮಕ್ಕಳು ಈ ಉಪಕರಣಗೊಳಡನೆಯೇ ಹೆಚ್ಚು ಸಮಯ ಕಳೆಯುತ್ತಾರೆ. ಆತ್ಮೀಯ ಸಂಬಂಧ ಸ್ಥಾಪಿಸಿಕೊಳ್ಳುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ
ಆಗ್ನೇಯ ಏಷ್ಯಾದ ಮಲೇಷ್ಯಾ ದೇಶ: ಡಾ ವೆಂಕಟಸ್ವಾಮಿ ಪ್ರವಾಸ ಕಥನ
ಅಲ್ಲಿಂದ ಇಳಿದು ಬಂದು ಕಟ್ಟಡದ ಮುಂದಿನ ಪ್ರಾಂಗಣದಲ್ಲಿ ನಿಂತುಕೊಂಡು ಅವಳಿ ಗೋಪುರಗಳನ್ನೇ ನೋಡತೊಡಗಿದೆವು. ಒಂದು ರೀತಿಯಲ್ಲಿ ತವರು/ಉಕ್ಕಿನ ಬಣ್ಣಹೊಂದಿರುವ ಕಟ್ಟಡದ ಮೇಲೆ ಚಂದ್ರನು ನಗುತ್ತಿದ್ದರೂ ಕಟ್ಟಡದ ಬೆಳಕಿನ ಮುಂದೆ ಅವನ ಮುಖ ಮಂಕಾದಂತೆ ಕಾಣಿಸುತ್ತಿತ್ತು. ಸುಮಾರು ಹೊತ್ತು ನಾವು ಆ ಕಟ್ಟಡದ ಕಡೆಗೆ ನೋಡುತ್ತಲೆ ನಿಂತಿದ್ದೆವು. ನಮ್ಮ ಸುತ್ತಲೂ ಮಂಗೋಲಿಯನ್ ಬಣ್ಣದ ತೆಳು ದೇಹಗಳ ಯುವ ಜೋಡಿಗಳು ಉಲ್ಲಾಸದ ಮಾತುಗಳಲ್ಲಿ ತೊಡಗಿಕೊಂಡಿದ್ದವು.
ಡಾ. ಎಂ. ವೆಂಕಟಸ್ವಾಮಿ ಮಲೇಷ್ಯಾ ಪ್ರವಾಸದ ಅನುಭವಗಳು ನಿಮ್ಮ ಓದಿಗೆ
ಮೂರು ಹಿಂಸಾ ಪ್ರಕರಣಗಳು: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನನ್ನ ಹೆಂಡತಿ ಇಂಗ್ಲಿಷ್ನಲ್ಲಿ ಇಷ್ಟೆಲ್ಲ ಹೇಳಿದಳು. ಇದು ಆಕೆಗೆ ಅರ್ಥವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ನಾಯಿಮರಿಯನ್ನು ಕಂಕುಳಿನಲ್ಲಿ ಬಿಗಿಯಾಗಿ ಇಟ್ಟುಕೊಂಡು ಕತ್ತನ್ನು ಹಿಸುಕುತ್ತಾ ತಲೆಯ ಮೇಲೆ ಜೋರಾಗಿ ಮೊಟಕುತ್ತಾ ಕರೆದುಕೊಂಡು ಹೋದಳು. ನಾಯಿಮರಿ ಕೂಡ ಬೊಗಳುತ್ತಲೇ ಕೊಸರಾಡುತ್ತಿತ್ತು. ನಾವು ನಾಲ್ಕೂ ಜನ ಮಂಕಾದೆವು, ಗಾಬರಿ ಬಿದ್ದೆವು. ವಾಯು ವಿಹಾರದ, ಆಟದ ಸಂತೋಷ ಮಾಯವಾಗಿತ್ತು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಒಂಭತ್ತನೆಯ ಬರಹ
ಬ್ರಸೆಲ್ಸ್ನಲ್ಲಿ ಸುತ್ತಾಟ (೨): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಕ್ಯಾಥೆಡ್ರಲ್ ಮೇಲೆ 14 ವೈಮಾನಿಕ ದಾಳಿಗಳನ್ನು ಅಂದರೆ 14 ಬಾಂಬ್ಗಳನ್ನು ಎಸೆಯಲಾಯಿತು ಎನ್ನಲಾಗಿದೆ. ಇಡೀ ನಗರ ಧ್ವಂಸವಾದರೂ ಕ್ಯಾಥೆಡ್ರಲ್ ಒಂದಷ್ಟು ಹಾನಿಗೆ ಒಳಗಾದರೂ ಅದರ ಸಂಪೂರ್ಣ ರಚನೆ ಮತ್ತು ಎರಡು ಸ್ಪೈರ್ಡ್ ಈಗಲೂ ಹಾಗೆಯೇ ಉಳಿದುಕೊಂಡಿವೆ ಎಂದು ನಮ್ಮ ಗೈಡ್ ಹೇಳಿದ. ಅದರ ಬಗ್ಗೆ ವಿವರಗಳನ್ನು ಅಂತರಜಾಲದಲ್ಲಿ ನೋಡಿದಾಗಲೂ ಅದೇ ರೀತಿ ಬರೆಯಲಾಗಿತ್ತು.
ಬ್ರಸೆಲ್ಸ್ನಲ್ಲಿ ಓಡಾಡಿದ ಮತ್ತಷ್ಟು ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಕೋಟಿ ಸೈಕಲ್, ಎರಡು ರೈಲ್ವೆ ನಿಲ್ದಾಣ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಎಂಟನೆಯ ಬರಹ
ಬ್ರಸೆಲ್ಸ್ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು.
ಯೂರೋಪ್ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ