ಇಷ್ಟೊಂದ್ ಜನಾ.. ಎಲ್ಲಿಂದ ಬಂದೋರು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಎರಡನೇ ಭಾಗ
ಕೆ. ಸತ್ಯನಾರಾಯಣ ಪ್ರವಾಸ ಪ್ರಬಂಧಗಳ ಹೊಸ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ” ಆರಂಭ
ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು.
ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ”
ದೂರದ ಬೆಟ್ಟ “ಪ್ಯಾರಿಸ್”…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಊಟ ಮುಗಿದ ಮೇಲೆ ಬೆಳಿಗ್ಗೆ ನಿಂತು ವಾಪಸ್ ಬಂದಿದ್ದ ಸಫಾರಿ ಟ್ರೈನಿಗೆ ಹೋಗಲು ಸುಶೀಲ ನಾನು ಎದ್ದೋಗಿ ಸಾಲಿನಲ್ಲಿ ನಿಂತುಕೊಂಡೆವು. ಅದು ಒಂದು ರೀತಿಯಲ್ಲಿ ಹೈದರಾಬಾದ್‌ನ ರಾಮೋಜಿ ಸಿಟಿಯ ಟಾಯ್ ಟ್ರೇನ್‌ನಂತೆ ಕಾಣಿಸಿ ಅದರ ವಿವರಗಳನ್ನು ಹಾಕಿದ್ದರು. ಸಾಲಿನಲ್ಲಿ ಸುತ್ತಿಸುತ್ತಿ ಒಳಕ್ಕೆ ಹೋದಂತೆ ಅದೊಂದು ಹಾರರ್ ಟ್ರೇನ್ ಸುಳಿವು ನೀಡತೊಡಗಿತು. ಏನೋ ಎಡವಟ್ಟು ನಡೆಯಲಿದೆ ಎಂಬುದಾಗಿ ನನ್ನ ಆರನೇ ಇಂದ್ರಿಯ ಹೇಳತೊಡಗಿತು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ
ಅಸ್ಥಿಪಂಜರಗಳ ಭಯಾನಕ ಸ್ಮಾರಕ!: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಇದೇ ರೀತಿಯ ತಲೆಬುರುಡೆ ಮಾಲೆಗಳು ಚರ್ಚ್‌ನ ಬಲಿಪೀಠದ ಸುತ್ತಲು ಮತ್ತು ದೈತ್ಯಾಕಾರದ ಹೌಸ್ ಆಫ್ ಶ್ವಾರ್ಜೆನ್‌ಬರ್ಗ್‌ನ ರಾಜವಂಶದ ಲಾಂಛನವನ್ನು (ಜರ್ಮನ್ ಮತ್ತು ಜೆಕ್-ಬೊಹೆಮಿಯಾ) ಫ್ರಾಂಟಿಸೆಕ್‌ರಿಂಟ್ ಎಂಬ ಬಡಗಿ ಪ್ರವೇಶದ್ವಾರದ ಗೋಡೆಯ ಮೇಲೆ ಮೂಳೆಗಳಲ್ಲಿ ಬಿಡಿಸಿದ್ದಾನೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಮೂರನೆಯ ಭಾಗ ಇಲ್ಲಿದೆ
ಗೋಡೆಯ ಮೇಲೆ ಪ್ರತಿಭಟನೆಯ ಚಿತ್ತಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಇದು 1980ರಲ್ಲಿ ಅಮೆರಿಕಾದಲ್ಲಿ ಜಾನ್ ಲೆನ್ನನ್ ಹತ್ಯೆಯಾದ ಮೇಲೆ ಪ್ರೇಗ್‌ನಲ್ಲಿ ಕಲಾವಿದರ ಗುಂಪೊಂದು ಈ ಗೋಡೆಯ ಮೇಲೆ ತಮ್ಮ ಸಹಿಗಳನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದ ಕಲಾ ಗೋಡೆ. ಅದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಅಲ್ಲಿಗೆ ತಲುಪಿದ ಯಾರಾದರೂ ಆ ಗೋಡೆಯ ಮೇಲೆ ಏನಾದರೂ ಗೀಚಬಹುದು.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಎರಡನೇ ಭಾಗ ಇಲ್ಲಿದೆ
ಚೆಕಿಯಾ ದೇಶದಲ್ಲಿ…(೧): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನಿಲ್ದಾಣದಲ್ಲಿ ಪೋರ್ಟರುಗಳು, ಬಾಡಿಗೆ ಕಾರುಗಳವರು ಹಿಂದೆ ಬೀಳಲಿಲ್ಲ. ಕ್ರಾಂತಿ `ಬೋಲ್ಟ್’ ಕಂಪನಿಯ ಕಾರು ಬುಕ್ ಮಾಡಿದ್ದೇ ಎರಡೇ ನಿಮಿಷಗಳಲ್ಲಿ ಕಾರು ಬಂದು ನಿಂತುಕೊಂಡಿತು. ಗಟ್ಟಿಮುಟ್ಟಾದ ಚೆಕ್ ಯುವಕ ಒಂದು ಸಣ್ಣ ನಗು ಬೀರಿ `ಹಲೋ’ ಎಂದು, ನಮ್ಮ ಲಗೇಜ್‌ಗಳನ್ನು ಡಿಕ್ಕಿಯಲ್ಲಿಟ್ಟು ನಾಲ್ವರು ಕುಳಿತುಕೊಂಡೆವು.
ಚೆಕಿಯಾ ದೇಶದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೊದಲ ಭಾಗ ಇಲ್ಲಿದೆ
ಅನ್ನ ದೇವರ ಮುಂದೆ ಇನ್ನ ದೇವರು ಉಂಟೆ?: ಅಂಜಲಿ ರಾಮಣ್ಣ ಪ್ರವಾಸ ಕಥನ
ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. ‘ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣ
ಅಂಜಲಿ ರಾಮಣ್ಣ ಪ್ರವಾಸ ಅಂಕಣ ‘ಕಂಡಷ್ಟೂ ಪ್ರಪಂಚ’ ಮತ್ತೆ ಶುರು…
ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್‌ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮೇಘಾಲಯದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಬರಹ
ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…
ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ