ಉಳ್ಳವರ ಜೊಳ್ಳುತನ: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಒಮ್ಮೆ ‘ಬಿಹಾರಿ ಭೈಯ್ಯ’ ಹೀಗೆ ಕರ್ಕೊಂಡ್ ಬರುವಾಗ, ಆ ಕುಡುಕ ಮಹಾಶಯನೇ ಬ್ಯಾಲೆನ್ಸ್ ತಪ್ಪಿಸಿ, ಬೈಕ್ ಬಿದ್ದು, ಇಬ್ಬರಿಗೂ ಪೆಟ್ಟಾಗಿ, ನೋಡಿದವರು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಆ ಮಹಾಶಯನ ಮಕ್ಕಳು, ಮೊಮ್ಮಕ್ಕಳು ಬೈಕ್ ಚಾಲಕನದೇ ತಪ್ಪೆಂದು ದಬಾಯಿಸಿ, ಅವನಿಂದಲೇ ಹಣ ಪೀಕಿ, ಟ್ರೀಟ್ಮೆಂಟ್‌ಗೆ ಅದಕ್ಕೆ ಇದಕ್ಕೆ ಎಂದು ಅದರಲ್ಲಿ ಬೇಕಾದ ಬೇಡದ ಟೆಸ್ಟ್‌ಗಳನ್ನೆಲ್ಲ ಮಾಡಿಸಿ, ಆ ಬಿಹಾರಿ ಭಯ್ಯ ಈ ಊರಿನ ಸಹವಾಸವೇ ಬೇಡ ಎಂದು ಈಗ ಇಲ್ಲಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗೋಣಿಪುರಕ್ಕೆ ಮನೆ ಶಿಫ್ಟ್ ಮಾಡಿದನಂತೆ!
ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಸರ್ವಶಕ್ತ ಮಹಿಳೆಯಲ್ಲ ನಾನು, ನಿಜ ಮಹಿಳೆ: ಎಲ್.ಜಿ.ಮೀರಾ ಬರಹ
ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ!
ಉದ್ಯೋಗಸ್ಥ ಮಹಿಳೆಯರು ಮನೆ-ಉದ್ಯೋಗ ಸಂಭಾಳಿಸುವುದರ ಕುರಿತು ಡಾ. ಎಲ್. ಜಿ. ಮೀರಾ ಬರಹ
ಶೀರ್ಷಿಕೆಗಳ ಸಂಗತಿ: ಅರುಣಾ ಜಿ ಭಟ್. ಬದಿಕೋಡಿ ಬರಹ
ಇತ್ತೀಚೆಗೆ ಕಾದಂಬರಿಗಳ ಶೀರ್ಷಿಕೆಗಳು ಅತಿ ಆಕರ್ಷಕವಾಗಿರಲು ಬಯಸುತ್ತಾರೆನೋ? ಹಾಗಾಗಿ ಹಿರಿಯ ಕವಿಗಳ ಕವಿತೆಯ ಸಾಲುಗಳನ್ನು ಕಾದಂಬರಿಗೆ ಶೀರ್ಷಿಕೆಯಾಗಿಸುತ್ತಾರೆ. ಆಹಾಹಾ… ಅದೇನು ಮೋಹಕ ಪದ ಮಾಲೆಗಳು! ಕೆಲವು ಸಲ ಆ ಸಾಲುಗಳಿಗೆ ಸೋತು, ಹೇಗಿದೆಯೆಂದು ಓದಲು ಹೊರಟರೆ! ಹತ್ತು ಸಾಲಿಗೆ ನಿಲ್ಲಿಸುವ ಹಾಗಾಗುತ್ತದೆ. ಅದು ಕಾದಂಬರಿಯೋ, ಲೇಖನವೋ? ಪ್ರಬಂಧವೋ? ಒಂದೂ ಗೊತ್ತಾಗದ ಹಾಗೇ.
ಸಾಹಿತ್ಯ ಕೃತಿಗಳ ಶೀರ್ಷಿಕೆಗಳ ಕುರಿತು ಅರುಣಾ ಜಿ ಭಟ್. ಬದಿಕೋಡಿ ಬರಹ
ಚಿಗುರು, ಮಳೆ ಮತ್ತು ಒಲವು…: ಮಹಾಲಕ್ಷ್ಮಿ ಕೆ. ಎನ್. ಬರಹ
ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.
ಮಹಾಲಕ್ಷ್ಮಿ ಕೆ. ಎನ್. ಬರಹ ನಿಮ್ಮ ಓದಿಗೆ
ರಾಜಕ್ಕಳ ನಿರ್ಧಾರ…!: ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ
“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ “ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ.
ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ ನಿಮ್ಮ ಓದಿಗೆ
ಆತಂಕ ಮೂಡಿಸಿದ ಅನಾಥ ಚಪ್ಪಲಿ!: ಶರಣಗೌಡ ಬಿ.ಪಾಟೀಲ ಪ್ರಬಂಧ
ಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅನಾಥ ಚಪ್ಪಲಿ ನೋಡಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ. ಕೆಲಸಕ್ಕೆ ಹೋಗಲೂ ಮನಸ್ಸಾಗುತ್ತಿಲ್ಲ ಅಂತ ಪಂಪಾಪತಿ ಹೇಳಿದಾಗ ಆತನಿಗೋಸ್ಕರ ಇವತ್ತು ನಾವು ಕೆಲಸಾ ಬಿಟ್ಟರೂ ಪರವಾಗಿಲ್ಲ ನಮಗೆ ನಮ್ಮ ಗೆಳೆಯನ ಸುರಕ್ಷತೆ ಮುಖ್ಯ ಅಂತ ದೇವಿಂದ್ರನೂ ದನಿಗೂಡಿಸಿದ.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹ
ಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗಳು, ಮುಂದಾಳುಗಳು ಹಾಗೂ ಇನ್ನಿತರರು ಮಾಧ್ಯಮಗಳ ನಡುವೆ ಅಸೂಯೆ, ವೈಮನಸ್ಸು, ಅಹಂಕಾರ ಇರುತ್ತದೆ; ಆದರೆ ಬಂಡವಾಳಶಾಹಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ದಂಧೆಕೋರರು, ಭಯೋತ್ಪಾದಕರು, ಉಗ್ರಗಾಮಿಗಳು, ಆಯಕಟ್ಟಿನ ಜಾಗಗಳಲ್ಲಿ ಆಡಳಿತ ನಡೆಸುವ ಭ್ರಷ್ಟಾಚಾರಿಗಳ ನಡುವೆ ತುಂಬಾ ದೊಡ್ಡ ಸಾಮರಸ್ಯವಿದೆ: ಸಹಕಾರವಿದೆ.
ಗೋಳೂರ ನಾರಾಯಣಸ್ವಾಮಿ ಬರಹ ನಿಮ್ಮ ಓದಿಗೆ
ಕಂಬನಿಯೊರೆಸಿದ ನಂಬಿಕೆ!: ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ
ಇವನ ವಯಸ್ಸಿನ ಯಾರೊಬ್ಬರು ಸಧ್ಯ ಹಮಾಲಿ ಕೆಲಸಾ ಮಾಡುತ್ತಿರರಿಲ್ಲ. ಆದರೆ ಇವನು ಮಾಡೋದು ನೋಡಿ ಅನೇಕರು ಆಶ್ಚರ್ಯ ಪಡುತಿದ್ದರು. ಬಹಳ ವರ್ಷದಿಂದಲೂ ಒಂದೇ ಕಡೆ ಕೆಲಸಾ ಮಾಡ್ತಿದ್ದಾನೆ. ಇವನಿಗು ಮಾಲಿಕರಿಗು ತಾಳ ಮೇಳ ಸರಿಯಾಗಿದೆ ಅಂತ ಮಾತಾಡುತಿದ್ದರು. ಇವನ ಜೊತೆಗೆ ಕೆಲಸ ಮಾಡುವ ಅನೇಕರು ಆಗಲೇ ಪಗಾರ ಆಸೆಗೋ ಮತ್ತೊಂದಕ್ಕೋ ಕೆಲಸಾ ಬಿಟ್ಟು ಬೇರೆ ಬೇರೆ ಕಡೆ ಸೇರಿಕೊಂಡಿದ್ದರು.
ಶರಣಗೌಡ ಬಿ ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಪ್ರಜ್ಞಾ ಪ್ರವಾಹವನ್ನು ಧಾರೆಯಾಗಿಸಿದ ಆಖ್ಯಾನಕಾರ ಕೆ. ಟಿ. ಗಟ್ಟಿ: ನಾರಾಯಣ ಯಾಜಿ ಬರಹ
ಗಟ್ಟಿಯವರು ಕಾದಂಬರಿ ಬರೆಯುವಾಗ ನವ್ಯ ತನ್ನ ಉತ್ತುಂಗದಲ್ಲಿ ಇತ್ತು. ತೇಜಸ್ವಿ, ಆಲನಹಳ್ಳಿ ಶ್ರೀ ಕೃಷ್ಣ, ಅಡಿಗರು, ಅನಂತಮೂರ್ತಿ ಇವರೆಲ್ಲರೂ ತಮ್ಮ ವಿಶಿಷ್ಟ ಬಗೆಯ ಬರಹಗಳಿಂದ ಕನ್ನಡ ಸಾಹಿತ್ಯಲೋಕವನ್ನು ರಂಜನೆಯಿಂದ ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗಿದ್ದರು.
ಇತ್ತೀಚೆಗೆ ತೀರಿಕೊಂಡ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಸಾಹಿತ್ಯದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ