Advertisement
ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

ನಿನ್ನ ಕಣ್ಣಿನ್ಯಾಗ

ನಿನ್ನ ಕಣ್ಣಿನ್ಯಾಗ
ಕನಸೊಂದ ಹುಟ್ಟಿತ್ತ
ನೆರಳ ಬೆಳಕೊಂದ ಮೂಡಿತ್ತ
ಹಸಿವ ದಣಿವಾ ನೋವಾ
ಪ್ರೇಮದನಿವಾಹಾರವಾಗಿ ಮರೆಸಿತ್ತ
ನನ್ನ ಚಿತ್ತ ನಿನ ಮ್ಯಾಲಯಿತ್ತ

ನಿನ್ನ ಕಣ್ಣಿನ್ಯಾಗ
ನನಗೊಂದ ಕನಸ ಕಟ್ಟಿತ್ತ
ಬದುಕ ಆಸೆ ಹುಟ್ಟಿತ್ತ
ಚಂದದ ಮನಿಗೊಂದ ಗ್ವಾಡಿ ಕಟ್ಟಿ
ಬಣ್ಣದಾಂಗ ಮಾಡಿ ಬೆಳಗ ಮೂಡಿಸಿತ್ತ

ಗಿರಾಣ ಹಿಡದಾಂಗಯಿತ್ತ
ನಿನ್ನ ಕಣ್ಣಾಗಿನ ಬೆಳಗ
ಬಿಡ್ಸಾಕ ಬಂದಿತ್ತ
ಚಿಮಣಿಯ ಬೆಳಕಿನಾಂಗ
ಆ ಬೆಳಕಿನ್ಯಾಗ ಕ್ರರಗಿದ್ದನಾ
ಬೆಳಗ ಆದಾಂಗ

ದೂರದ ಕತ್ತಲ ದಾರ್ಯಾಗ
ಲಾಟನ್ ಹಿಡದ ದಾರಿ ತೋರಿಸಿದಂಗಾ
ನೀ ಮುಂದಾ ಅಲ್ಲಾ
ನಾ ಮುಂದ ಅಲ್ಲಾ
ನನ್ನ ಮಗ್ಗಲಕ ನೀ ನಿಂತಾಂಗ
ಕಾಲಾಗಿನ ದಾರಿ ಬಾಳ ಸನೀಪಯಿತ್ತ

ನಿನ್ನ ಕಣ್ಣಾಗಿನ ಬದಕಾ
ದೂರದ ತೀರದ ಊರಾ ಸೇರಿತ್ತ
ನೀ ಕಂಡ್ಹಾಂಗ ಆಗಿತ್ತ
ನಿನ್ನ ಕಣ್ಣಿನ್ಯಾಗ ಅದಹೆಂತಾ ಕನಸಯಿತ್ತ

ಅಜೀತ ಪಾತ್ರೋಟ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದವರು.
ಸಧ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ(phd) ಮಾಡುತ್ತಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

10 Comments

  1. Arjun basavaraja

    ಬದುಕಿನ ಭಾವ

    Reply
    • Ajit

      ಧನ್ಯವಾಗಳು ಪ್ರತಿಕ್ರಯಿಸಿದ್ದಕೆ

      Reply
  2. karilinga

    ರಮ್ಯವಾಗಿದೆ

    Reply
    • ಅಜೀತ

      ಧನ್ಯವಾದಗಳು

      Reply
  3. ಅಜೀತ ಪಾತ್ರೋಟ

    ಕವಿತೆ ಪ್ರಕಟಿಸಿದಕೆ ಧನ್ಯವಾದಗಳು ಕೆಂಡಸಂಪಿಗೆ

    Reply
  4. Kousarbanu

    Superb sir.. ನಿಮ್ಮ ಕನಸೂಂದು ನನಸಾಗಬೇಕ ಮತ್ತ… ಇದ ಜೀವನದ ಸಾರ..

    Reply
    • Ajit

      ಧನ್ಯವಾದಗಳು

      Reply
  5. R Mithunkumar Naik

    ?????Guruji

    Reply
    • AJIT PATROT

      ಧನ್ಯವಾದಗಳು

      Reply
  6. Ramesha Narayanakar K V

    Channagi idea kavithe

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ