ಗಜಲ್
ನಿನ್ನ ಕಣ್ಣ ಬಟ್ಟಲ ಬೆಳಕಿರಲು ಹಗಲಿಗೆ ಸೂರ್ಯನೇತಕೆ
ಹಿತವಾದ ಮುಗುಳುನಗೆ ಇರಲು ರಾತ್ರಿಗೆ ಚಂದಿರನೇತಕೆ
ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ
ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ
ಮನದಿ ಒಲವ ಹಣತೆ ಬೆಳಗುತಿರಲು ನಕ್ಷತ್ರಗಳೇಕೆ
ನೀನಿಲ್ಲದ ಊರಲ್ಲಿ ಹಾಳಾದ ಈ ಕಾವಲೇತಕೆ
ನೀನಿಲ್ಲದ ಬರೀ ಖಾಲಿ ಜಿಂದಗಿ ಅಭಿಗೇತಕೆ
ಒಲಿದ ಜೀವಗಳು ಒಂದಾಗುವ ಖುಷಿಗೆ ಭಯವೇತಕೆ
ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು
![](https://kendasampige.com360degree.com/wp-content/uploads/2020/12/ks-profile.jpg)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ