Advertisement
ಎಚ್. ವಿ. ಶ್ರೀನಿಧಿ ಅನುವಾದಿಸಿದ ಆಲ್ಬರ್ಟ್ ಕಮೂ ಕವಿತೆ

ಎಚ್. ವಿ. ಶ್ರೀನಿಧಿ ಅನುವಾದಿಸಿದ ಆಲ್ಬರ್ಟ್ ಕಮೂ ಕವಿತೆ

ಹೊರಗೆ ಸುತ್ತಾಡಿ ಬನ್ನಿ

ಅರ್ಥವನ್ನು ಅರಸಿ
ಬೇರ್ಪಡಿಸಿ ಖೇದವನ್ನು
ಬೇಜಾರಿನಿಂದ

ಹೊರಗೆ ಸುತ್ತಾಡಿ ಬನ್ನಿ

ಅದಾಗಿರಬೇಕಿಲ್ಲ
ಉದ್ಯಾನದ ಆಹ್ಲಾದದ ನಡಿಗೆ,
ತುಂಬು ವಸಂತದ ಸುಂದರ ಘಳಿಗೆ,
ಹೂವ ಪರಿಮಳದ
ಕಾವ್ಯಾತ್ಮಕ ರೂಪಕ ಲೋಕ,
ಸರಾಗವಾಗಿ ಹೊಕ್ಕಂತೆ ನಾಕ.

ಸುತ್ತಾಟದಲ್ಲಿ ನೀವೆತ್ತಬೇಕಿಲ್ಲ
ವಿಧ ವಿಧ ಅಸ್ತಿತ್ವದ ಅವತಾರ
ಮತ್ತು ಹೊಳೆಯಬೇಕಿಲ್ಲ
ನಿಮಗೆ ಯಾರ ಮೆದುಳಿಗೂ
ಸಿಗದ ಬದುಕಿನ ಹೊಳಹು.

ಹೊರಗೆ ಸುತ್ತಾಡಿ ಬನ್ನಿ
ಭಯ, ಹಿಂಜರಿಕೆ ಸಲ್ಲ
ನಿಮ್ಮೊಡನೆ ನೀವು ಕಳೆಯಲು ಕಾಲ.

ಅರ್ಥ ಸಿಗಲಿ
ಅಥವಾ ಸಿಗದಿರಲಿ
ಆದರೆ
ಕದಿಯಿರಿ ಕೊಂಚ ಸಮಯ
ಕೊಟ್ಟುಕೊಳ್ಳಿರಿ ಅದನು
ಉಚಿತವಾಗಿ, ಕೇವಲ ನಿಮಗೆ.

ಆಯ್ದುಕೊಳ್ಳಿ ಖಾಸಗಿ ಮತ್ತು
ಏಕಾಂತದ ಬದುಕು
ಅದರಿಂದ ನೀವಾಗುವುದಿಲ್ಲ
ಲೋಕವಿರೋಧಿ,
ಇಹಕೆ ಹೆದರೋಡಿದ
ಪಲಾಯನವಾದಿ.

ಆದರೆ ನೀವು ಉಸಿರಾಡಬೇಕು
ಮತ್ತು ನೀವು ‘ಇರ’ಬೇಕು.

ಹೊರಗೆ ಸುತ್ತಾಡಿ ಬನ್ನಿ.

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

6 Comments

  1. ಅಪೂರ್ವ

    ಅದ್ಬುತವಾದ ಅನುವಾದ, ನಾನು ನಿಮ್ಮ ದೋಡ್ಡ ಅಭಿಮಾನಿ, ನಿಮ್ಮ ಮುಂದಿನ ಬರವಣಿಗೆಯನ್ನು ಸದಾ ಕಾಯುತಿರುವೆ❤️❤️

    Reply
    • ಶ್ರೀನಿಧಿ ಎಚ್ ವಿ

      ಧನ್ಯವಾದ🙂

      Reply
    • SRINIDHI HV

      ಧನ್ಯವಾದ🙂

      Reply
  2. Poorvi

    ವ್ಹಾ ಚೆಂದದ ಕವಿತೆ

    Reply
    • SRINIDHI HV

      ಧನ್ಯವಾದ 🙂

      Reply
    • Inchara

      ಅಣ್ಣ ತುಂಬಾ ಚೆನ್ನಾಗಿ ಬರ್ದಿದಿರಾ

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ