Advertisement
ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ವಿದಾಯಕ್ಕೂ ಬೇಸರ…
ನಲಿವು ನೋವಾಗುವ ವೇಳೆ
ನೆನಪುಗಳು ಹೆಪ್ಪಿಡುವ ಸಮಯ
ವಿದಾಯಕ್ಕೂ ಬೇಸರ
ಭೇಟಿ ಮುಗಿದ ಮೇಲೆ…

ಭೇಟಿಯಾದರೂ ಹೇಗೆ?
ಮುಗಿಲು ಜಾರಿಬಿದ್ದು ಕಳೆದು
ಕಾಯ್ವ ಪರದೆ ಹರಿದ ಹಾಗೆ
ಧುತ್ತೆಂದು
ಸುರಿವ ಮಳೆ ಸ್ಥಾಯಿಗೊಂಡ ಬಗೆ..

ದೂರದಿಂದೊಂದು ನೋಟ
ಸಾವಿರ ಜನರ ನಡುವೆ
ಕೂಡುವ ಕಣ್ಣುಗಳ ತಪ್ಪಿಸಿ
ಆಗೀಗ ಕದ್ದು ನೋಡುವ ಕಲೆಗೊಪ್ಪಿಸಿ
ಸರಿವ ಸಮಯದಿ ಕ್ಷಣಗಳ ಹೆಕ್ಕಿ
ಮನದೊಳಗೆ ಹೆಪ್ಪಿಟ್ಟುಕೊಳ್ಳುವ ಸಿಹಿ…

ಆಗೀಗ ಮಾತುಗಳ ಆಡಿದ್ದೂ ಉಂಟು
ನೋಡುಗರಿಗೆ ಕೇಳುವ ಹಾಗೆ
ಶಬ್ದಗಳ ಮಿಡಿತಗಳಲಿ ಭೇಟಿಯ
ನವಿರು ಸವೆಯದ ರೀತಿ
ಮನಕೆ
ಕಾಲದಮಿತಿಯ ಹರವನು ಹಿಗ್ಗಿಸುವ ಛಾತಿ

ಕನಸಲಿ ನೇಯ್ದ ಅರೆ ಘಳಿಗೆಗಳಲಿ
ಒಬ್ಬರಿಗೊಬ್ಬರು ಎದುರಾಗುವಾಗ
ವಾಸ್ತವಕ್ಕೇನೋ ಅವಸರ
ಮನಸ ತುಂಬುವ ಕಳವಳ
ಕೈ ಜಾರಿ ಹಿಂದೆ ಸೇರುವ ನೆನಪಿಗೆ
ಒಳಗಡಿಯಿಡುವ ಸಡಗರ

ಇಂದು ಕಡಪಡೆವ ನಿಮಿಷಗಳೆಲ್ಲ ನಾಳೆಗೆ
ಇಂಬಾಗಿ ಕಾರ್ಯ ಮುಖಿ ಬದುಕಿಗೆ
ಒದಗಿಸಲು ಆಗೀಗ ಕಲ್ಪನೆಗಳ ಸೂಟಿ
ಮಾತು ,ಮೌನ, ನೋಟ ವಿದಾಯಗಳ ಒಂದು ಭೇಟಿ
ಮತ್ತೆ ನೆನಪಿಸಿ ಮರುಕಳಿಸುವ ವಾಸ್ತವ
ಸಾವಿರ ಜನರ ನಡುವೆಯೂ ನಾನು ಒಂಟಿ……

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ