Advertisement
ಡಾ. ಸತ್ಯವತಿ ಮೂರ್ತಿ ಬರೆದ ಈ ದಿನದ ಕವಿತೆ

ಡಾ. ಸತ್ಯವತಿ ಮೂರ್ತಿ ಬರೆದ ಈ ದಿನದ ಕವಿತೆ

ನಾಕಾಬುಧಾರಿಗಳು

ಹುಸಿನಗೆಯ ಮುಸುಕನ್ನು ಮೇಲೆಳೆಯುತ್ತ
ಕಣ್ಣು, ಮುಖ ಭಾವಗಳನು ಅದುಮಿಡುವ
ಸುಳ್ಳುಗಳ ಸರಮಾಲೆಯಲಿ ನಿಜವ ಮುಚ್ಚಿಡುತ್ತ
ಜೀವನದ ಬೆಲೆ ತೆತ್ತು ಕೊಂಡು ಧರಿಸಿ ನಟಿಸುವ
ನಕಾಬುಧಾರಿಗಳು!

ನಿಜದ ಮರೆ ಮಾಡಿ ನಗಲು ಯತ್ನಿಸುತ್ತೇವೆ
ಛಿದ್ರ ಹೃದಯವನೂ ಚಿತ್ರಿಸುತ್ತ ನಡೆಯುತ್ತೇವೆ
ಪಟಪಟ ಮಾತನಾಡಿ ದುಗುಡವನ್ನು ಮುಚ್ಚುತ್ತೇವೆ
ಮನದ, ಜೀವನದ ನೋವಿಗೆ ಮುಸುಕುಹಾಕುತ್ತೇವೆ

ನಡೆವ ದಾರಿಯುದ್ದಕ್ಕೂ ಕೆಸರು ತುಂಬಿದ್ದರೂ
ಲೋಕ ಕಾಣಲು, ಬಾಯಿ ರಾಗವನು ಹಾಡುತ್ತದೆ
ದುರದೃಷ್ಟದ, ನಿರಾಸೆಯ ಕೈಹಿಡಿದು ನಡೆದಿದ್ದರೂ
ಕಂಡವರಿಗೆ ಅದರರಿವು ಬರದಂತೆ ನಡೆಯುತ್ತದೆ.

ಇತರರಿಗೆ ಯಾರು ಕೊಟ್ಟರು ಈ ಅಧಿಕಾರ?
ನಮ್ಮ ಕಣ್ಣೀರ ಹನಿಗಳ ಒಳಹೊಕ್ಕು ನೋಡಲು,
ನಮ್ಮ ಮುಖವಾಡವಷ್ಟೆ ಅವರಿಗೆ ನಿಜದ ಸಾಕಾರ
ಅಂತರಾತ್ಮದ ಕೂಗು! ನಮಗೆ ಮಾತ್ರ ಮೀಸಲು

ಪ್ರಪಂಚವೆಣಿಸಿರಲಿ ನಾವು ಅತ್ಯಂತ ಸುಖಿಗಳೆಂದು!
ನಡೆಯೋಣ ನಾವು ನಕಾಬು ಧರಿಸುತ್ತಲೇ!
ನಿಜ ಮುಖವ ಕಾಣಿಸದೆಲೆ ಜೀವನದಲೆಂದು!
ಓ ಭಗವಂತ! ನಿನಗೆ ಮಾತ್ರ ಕೇಳಲಿ ನಮ್ಮಾತ್ಮದ ಕೂಗು

ನಿನ್ನಿಂದ ನಾವೇನೂ ಮುಚ್ಚಿಡಲಾರೆವು
ತೆರೆದಿಟ್ಟ ಪುಸ್ತವು ನಮ್ಮ ಜೀವನವು ನಿನಗೆ
ಹರಸು ನಮ್ಮನು ಜೀವನವ ಎದುರಿಸಲು
ನಿನ್ನ ರಕ್ಷಣೆಯಲಿ ಶಾಂತಿಯನ್ನರಸಲು!

ಡಾ. ಸತ್ಯವತಿ ಮೂರ್ತಿ ಬರಹಗಾರ್ತಿ. ಬೆಂಗಳೂರು ದೂರದರ್ಶನ ಮತ್ತು ಆಕಾಶವಾಣಿ ಕಲಾವಿದೆ. ಅವರ ಪಿಎಚ್.ಡಿ. ಪ್ರಬಂಧ ಸೇರಿದಂತೆ ನಾಲ್ಕು ಕೃತಿಗಳು ಪ್ರಕಟವಾಗಿವೆ. ಕಳೆದ 25 ವರ್ಷ ದಿಂದ ಮ್ಯಾಂಚೆಸ್ಟರ್ ನಲ್ಲಿ ನೆಲೆಸಿದ್ದಾರೆ. ರೆಫರೆನ್ಸ್ ಏಷ್ಯಾ ಮೆನ್ ವುಮನ್ ಅಚೀವ್ ಮೆಂಟ್ಸ್ ನಲ್ಲಿ ಇವರ ಹೆಸರು ಉಲ್ಲೇಖವಾಗಿದೆ. ಇಂಗ್ಲೆಂಡ್ ಸರ್ಕಾರದಿಂದ ಹಿಂದೂ ಪ್ರಿಸನ್ ಮಿನಿಸ್ಟರ್ ಆಗಿ ನೇಮಕಗೊಂಡಿದ್ದರು.  ಪ್ರಸ್ತುತ ಮಕ್ಕಳಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

 

 

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. ಪೂರ್ಣಿಮ

    ತುಂಬ ಚೆನ್ನಾಗಿದೆ

    Reply
  2. ಸಿ ಮರಿಜೋಸೆಫ್

    ನಾವೆಲ್ಲಾ ಮುಖ ನೋಡಿ ಮಣೆ ಹಾಕ್ತೀವಿ, ವ್ಯಕ್ತಿಗೌರವಕ್ಕಲ್ಲ ದೊಡ್ಡಸ್ತಿಕೆಗೆ ಬೆಲೆ ಕೊಡ್ತೀವಿ, ಬಣ್ಣ ನೋಡಿ ಬೆರಗಾಗ್ತೀವಿ.
    ನಕಾಬು (ಮುಖವಾಡ) ನೋಡಿ ಇಡೀ ವ್ಯಕ್ತಿತ್ವವನ್ನೇ ಅಳೆದುಬಿಡುತ್ತೇವೆ. ಮನಸ್ಸನೆಂದೂ ಹೊಕ್ಕಿ ನೋಡೆವು. “ನಮ್ಮ ಮುಖವಾಡವಷ್ಟೆ ಅವರಿಗೆ ನಿಜದ ಸಾಕಾರ
    ಅಂತರಾತ್ಮದ ಕೂಗು! ನಮಗೆ ಮಾತ್ರ ಮೀಸಲು” ಎಷ್ಟೊಂದು ಅರ್ಥಪೂರ್ಣ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ