Advertisement
ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು

ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು

ಬೇಸಿಗೆಯ ಹಗಲೆಂದು ಬಣ್ಣಿಸಲೇ ನಿನ್ನ?

ಬೇಸಿಗೆಯ ಹಗಲೆಂದು ಬಣ್ಣಿಸಲೇ ನಿನ್ನ?
ಅದಕಿಂತ ನಿನ್ನ ಸೊಬಗಿನ ಹದ ಅಚಲ:
ಬಿಸಿಗಾಳಿ ನರಳಿಸುವದು ಸವಿ ಹೂಗಳ
ಕರಗುವದು ಬೇಸಿಗೆಯ ಕಾಲ ಬೇಗ:
ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ.
ಮಸುಕಾಗದು ನಿನ್ನ ಸೊಬಗಿನ ಬೇಸಗೆ
ಮುಪ್ಪುತಾಗದು ನಿನ್ನ ಯೌವನದ ಬಿಸಿಗೆ
ಸಾವು ಸೆಳೆಯದು ನಿನ್ನ ಅದರರಮನೆಗೆ,
ಬೆಳೆದುಳಿವೆ ನೀನೀ ಅಳಿಯದ ಸಾಲುಗಳಲಿ:
ಬದುಕು ಬಯಸುವ ಜನರಿರುವರೆಗೂ ಜಗದಲಿ
ಇರುವುದೀ ಕವಿತೆ, ನಿನ್ನ ಹೆಸರ ಉಳಿಸುತಲಿ!

ಪ್ರೀತಿಯೆಂಬ ಸತ್ಯ

ತಾ ನುಡಿವುದೆಲ್ಲ ಸತ್ಯವೆನಲು ನಲ್ಲೆ
ನಂಬುವೆ, ತಿಳಿದರೂ ಅದರಡಿಯ ನಿಜ
ಜಗದ ನಾಲಿಗೆಯಾಳವ ಅರಿಯದ
ತರುಣ ನಾನೆಂದು ತಿಳಿಯಲಿ ಬಿಡಿ!
ಆ ಸಿಹಿ ಕಲ್ಪನೆಯ ಜಂಭದ ನಲಿವಲಿ
ನೆನೆವೆ ನಾ ಯೌವನದ ನಿನ್ನೆಗಳ ನಿಧಿ,
ಮನದನ್ನೆಯ ಸವಿಮಾತುಗಳ ನಮಿಸುತಲಿ:
ಸತ್ಯವ ಬಚ್ಚಿಟ್ಟರೂ ನಾವಿಬ್ಬರೂ ಇಲ್ಲಿ,
ಹೇಳಿಲ್ಲ ಅವಳೆಲ್ಲೂ ಸುಳ್ಳಲ್ಲವೆಂದು
ನಾನೂ ನಂಬಿಲ್ಲ ನಾ ತರುಣನೆಂದು.
ಪ್ರೀತಿಯೆಂಬುದು ನಂಬಿದಂತೆ ಕಾಣುವ ಬಳ್ಳಿ
ಬೆಳೆದಷ್ಟೂ ಬಲವದಕೆ ಒಲವಿನ ಹುಸಿಗಳಲಿ
ನನಗವಳು, ಅವಳಿಗೆ ನಾ ಪ್ರೇಮದ ಹೊದಿಕೆ
ಕೊರತೆಗಳು ಕರಗಿವೆ ಹೊಗಳಿಕೆಯ ಹದಕೆ!

 

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

3 Comments

  1. Vijaya Narasimha

    ಎರಡು ಕವನಗಳೂ ಚೆಂದವಾಗಿವೆ

    ಪ್ರೀತಿಯೆಂಬ ಸತ್ಯ ಅರ್ಥಪೂರ್ಣ ಮತ್ತು ಅನುಭವ ಜನಿತವಾಗಿದೆ

    Reply
    • ನಾಗರಾಜ ಕೆ ಆರ್

      ತುಂಬಾ ಚೆನ್ನಾಗಿದೆ ಸರ್.
      ನಿಮ್ಮ ಈ ಹವ್ಯಾಸವನ್ನು ಮುಂದುವರಿಸಬೇಕು

      Reply
  2. bi

    ಸಾನೆಟ್ ಹದಿನಾಲ್ಕು ಸಾಲಿನ ಪದ್ಯ…ಲಯ ತಪ್ಪಿದೆ
    ಕವಿತೆಗೆ ಸಾನೆಟ್ ಲಕ್ಷಣಗಳಿಲ್ಲ…

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ