Advertisement
ಮುರಳಿ ಹತ್ವಾರ್ ಅನುವಾದಿಸಿದ ವಿಲಿಯಮ್ ವರ್ಡ್ಸವರ್ಥ್ ನ ಒಂದು ಕವಿತೆ

ಮುರಳಿ ಹತ್ವಾರ್ ಅನುವಾದಿಸಿದ ವಿಲಿಯಮ್ ವರ್ಡ್ಸವರ್ಥ್ ನ ಒಂದು ಕವಿತೆ

 

 

 

 

ಅಲೆದಿದ್ದೆ ನಾ ಒಂಟಿ ಮೋಡದಂತೆ

(ಮೂಲ: ವಿಲಿಯಮ್ ವರ್ಡ್ಸವರ್ಥ್ I Wandered As A Lonely Cloud)

ಅಲೆದಿದ್ದೆ ಅಂದು ನಾನೊಬ್ಬನೇ
ಗಿರಿದರಿಗಳ ಮೇಲೆ ತೇಲುವ ಒಂಟಿ ಮೋಡದಂತೆ
ಕಣ್ಸೆಳೆದವು ಒಮ್ಮಿಂದೊಮ್ಮೇನೇ
ಹೊನ್ನ ಬಣ್ಣದ ಡ್ಯಾಫೋಡಿಲ್ ಗಳ ಸಂತೆ
ಕೆರೆಯ ಬದಿ, ಮರಗಳ ನೆರಳಿನಲಿ
ಕಂಪಿಸಿ ಕುಣಿದಿದ್ದವವು ತಂಗಾಳಿಯಲಿ

ಅನಂತಾನಂತ ಹೊಳೆಯುತ ಮಿನುಗಿದಂತೆ
ನಕ್ಷತ್ರಗಳು ಆಕಾಶ ಗಂಗೆಯಲಿ
ಹರಡಿದ್ದವವು ಕೊನೆಯಿಲ್ಲದ ಸರತಿಯಂತೆ
ಆ ದಡದ ಅಂಚಿನ ಬದಿಯಲಿ,
ಕಣ್ಣೋಟದ ಚೀಲಗಳ ತೆರೆ-ತೆರೆದುಕೊಂಡೆ
ತಲೆದೂಗಿ ನಲಿನಲಿವ ಸಾವಿರ ಹೂಗಳ ತುಂಬಿಕೊಂಡೆ

ನರ್ತಿಸಿದ್ದವು ನೀರಲೆಗಳು ಹೂ ಸ್ಪರ್ಶದಲಿ
ಆದರೂ ಗೆಲುವು ಆ ಹೂವಿಗೆ ಮೆರುಗಿನಲಿ
ಹರುಷವಲ್ಲದೆ ಇನ್ನೇನು ಆ ಸಮಯದಲಿ
ಕವಿಹೃದಯಕೆ ಸಮರಸ ಈ ಸ್ನೇಹದಲಿ
ಮೈಮರೆತು ನೋಡಿದೆ. ನೋಡುತ್ತಲೇ ಇದ್ದೆ
ಆ ದರುಶನದ ಸಿರಿಯನ್ನ ನನ್ನದಾಗಿಸಿಕೊಂಡಿದ್ದೆ:

ನಾನೀಗಾಗಾಗ ಒಬ್ಬನೇ ಗಹನ ಮನದಲಿ
ಇಲ್ಲಾ ಹಗುರ ಶೂನ್ಯದಲಿ ಕುಳಿತಾಗ
ಕಣ್ತುಂಬಿದ ಆ ಹೂಗಳ ಹೊನಲು ಮನದಂಗಳದಲಿ
ಏಕಾಂತದ ಸ್ವರ್ಗ – ಆ ಸುಂದರ ಜಾಗ;
ನನ್ನ ಹೃದಯದೊಳಾಗ ಸಂತಸವು ತುಂಬಿ,
ನಾನಾಗುವೆ ಡ್ಯಾಫೋಡಿಲ್‌ ಗಳ ಜೊತೆ ಕುಣಿವ ದುಂಬಿ

 

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ