Advertisement

ಯಕ್ಷಗಾನ ಶೈಲಿಯಲ್ಲಿ ಪು.ತಿ.ನ ವಿರಚಿತ “ಹರಿಣಾಭಿಸರಣ”

ಕವಿ ಪು.ತಿ.ನರಸಿಂಹಾಚಾರ್‌ ಅವರ ಗೀತನಾಟಕ ʻಹರಿಣಾಭಿಸರಣʼವನ್ನು ಯಕ್ಷಗಾನ ರೂಪಕಕ್ಕೆ ಅಳವಡಿಸುವ ಪ್ರಥಮ ಪ್ರಯೋಗವಿದು. ಕನ್ನಡ ಸಾಹಿತ್ಯ ಕಂಡ ಅಪರೂಪದ ದಾರ್ಶನಿಕ ಕವಿ ಪು.ತಿ.ನ. ಅವರ, ʻಹಂಸ ದಮಯಂತಿ ಮತ್ತು ಇತರ ರೂಪಕಗಳುʼ ಎಂಬ ಗುಚ್ಛದಲ್ಲಿನ ಒಂದು ರೂಪಕ ʻಹರಿಣಾಭಿಸರಣʼ. ಯಕ್ಷಗಾನದ ಛಂದಸ್ಸಿನಲ್ಲಾಗಲೀ ಅಥವಾ ಅದಕ್ಕೆ ಪೂರಕವಾದ ಮಟ್ಟಿನಲ್ಲಾಗಲೀ ಈ ಸಾಹಿತ್ಯ ಇಲ್ಲ. ಕೆಲವು ಚಿಕ್ಕ-ಪುಟ್ಟ ಬದಲಾವಣೆಗಳೊಂದಿಗೆ ಇದನ್ನು ಯಕ್ಷಗಾನ ಪಠ್ಯಕ್ಕೆ ಹೊಂದಿಸಿಕೊಂಡು, ರೂಪಕದ ಚೌಕಟ್ಟಿಗೆ ಅಳವಡಿಸಲು ಪ್ರಯತ್ನಿಸಿದ್ದೇವೆ. ರಾಮಾಯಣದ ಪಂಚವಟಿಯಲ್ಲಿನ ಮಾಯಾಜಿಂಕೆಯ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ಯಕ್ಷಗಾನದ ಪಠ್ಯಗಳಿಗಿಂತ ಕೊಂಚ ಭಿನ್ನವಾಗಿದ್ದು, ಕವಿಯ ಕಲ್ಪನೆಯನ್ನು ಅಂತೆಯೇ ರೂಪಕಕ್ಕೆ ಅಳವಡಿಸಲು ಯತ್ನಿಸಿದ್ದೇವೆ. ಮೂಲ ಪಠ್ಯದಲ್ಲಿರುವ ಗದ್ಯ-ಪದ್ಯಗಳೆರಡನ್ನೂ ಸೂಕ್ತವಾಗಿ ಬಳಸಿಕೊಂಡು, ರಂಗಪ್ರಯೋಗದ ಹರವನ್ನು ವಿಸ್ತರಿಸುವ ನೂತನ ಸಾಧ್ಯತೆಯೊಂದರ ಈ ಅನ್ವೇಷಣೆ ಇದಾಗಿದೆ.

ಕವಿ: ಪು.ತಿ. ನರಸಿಂಹಾಚಾರ್‌

ಹಿಮ್ಮೇಳ-
ಸಂಗೀತ ಸಂಯೋಜನೆ ಮತ್ತು ಭಾಗವತಿಕೆ: ಅನಂತ ಹೆಗಡೆ,
ದಂತಳಿಗೆ ಮದ್ದಳೆ: ಅನಂತಪದ್ಮನಾಭ ಫಾಟಕ್‌
ಚಂಡೆ: ಪ್ರಸನ್ನ ಭಟ್ ಹೆಗ್ಗಾರ್‌

ಮುಮ್ಮೇಳ:
ಶ್ರೀರಾಮ: ಸಂಜಯ ಬೆಳೆಯೂರ್‌
ಸೀತೆ: ಸದಾಶಿವ ಭಟ್,
ಮಲವಳ್ಳಿ ಲಕ್ಷ್ಮಣ: ನಾಗರಾಜ ಭಟ್‌, ಕುಂಕಿಪಾಲ
ರಾವಣ: ಶಶಾಂಕ ಕಾಶಿ
ಹರಿಣ: ಕುಮಾರಿ ಅಭಿಜ್ಞಾ ಹೆಗಡೆ‌

ನಿರ್ಮಾಣ ಮತ್ತು ನಿರೂಪಣೆ: ಅಲಕಾ ಕಟ್ಟೆಮನೆ
ವೀಡಿಯೊ: ಸತ್ಯ, ಬೆಳೆಯೂರು

ಕೃಪೆ: ಅನಂತ ಹೆಗಡೆ ದಂತಳಿಗೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ