Advertisement
ರಶ್ಮಿ ಹೆಗಡೆ  ಬರೆದ ಈ ದಿನದ ಕವಿತೆ

ರಶ್ಮಿ ಹೆಗಡೆ ಬರೆದ ಈ ದಿನದ ಕವಿತೆ

ಡಿಸೆಂಬರ್ ಎಂಬ ಮಾಯಾಂಗನೆ

1
ಈ ವರುಷದ ಕೊನೇ
ಕನ್ನೆಯಿವಳಿಗೆ ಕಪ್ಪು ಸೀರೆ
ಮೇಲೆ ಹೊಳೆವ ಹಿಮದ
ಚುಕ್ಕಿಗಳನ್ನಿಡಿಸಿದ್ದೇನೆ..
ಎಲ್ಲ ಮಾಸಗಳಿಗಿಂತ
ಮಾದಕ ಇವಳು
ಎಷ್ಟೂ ಕುಡಿಯಬಹುದು
ಇವಳ ಹೆಸರಲ್ಲಿ
ಎಂದೇ ನಂಬಿರುವೆ
ಇವಳು ಎಲ್ಲರಿಗೂ ಇಷ್ಟವೆಂದು
ಇವಳ ಎಳೆ ಗುಲಾಬಿ ಒಡಲು
ದಾಟಿ ಹೆಗಲ ಮೇಲಿರೋ
ಸೆರಗ ಪದರಗಳಲ್ಲಿ
ಶಿಲುಬೆಯ ಹಬ್ಬದ
ಬೆಳಕಿನ ಲೈಟುಗಳ ಮೋಜು
ಮೈತುಂಬೆಲ್ಲ ನ್ಯೂ ಇಯರ್‌ನ ಘಮಲು
ಹಳೆ ಮಗ್ಗಲ್ಲಿ ಹೊಸಾ ಬಿಯರು
ಇಯರ್ ಎಂಡ್‌ಳ ತರತರದ
ಮಿತ್ರಕೂಟಗಳ
ಲಗ್ಗೆಯ ಚಿತ್ತಾರಗಳು

2
ಬರಲೂ ತಡವಿಲ್ಲ
ಇವಳಿಗೆ ಹೊರಡಲೂ ಸವಡಿಲ್ಲ
ವರ್ಷಪೂರ್ತಿ ಕಾದಿಟ್ಟು
ಕಡೆದು ಕನಸಿದೆ
ಹತ್ತು ಹಲವು ಯೋಜನೆಗಳ
ಉಳಿದು ಚೂರಾದ ಕನಸುಗಳ
ಗುಡ್ಡೆ ಹಾಕಿ
ಕಾಡಂಚಿನ ಫೈರ್ ಕ್ಯಾಂಪಲಿ
ಗುಡ್ಡೆ ಹಾಕಿದ ಒಣ ಕಟ್ಟಿಗೆಗಳೊಟ್ಟಿಗೆ
ಒಟ್ಟು ಸೇರಿಸಿ
ಅಚಾನಕ್ ಅವಘಡವಾಯ್ತಾಂಬಂತೇ
ಚಳಿ -ಸೆರಗ ಜಾಡಿಸಿ
ನಗುತ್ತ ಕೊಡುವಳು
ಲಜ್ಜೆಗೇಡಿ

3
ಎಲ್ಲರಿಗೂ ಕಾಂಬುವಳು
ಶ್ರಮಿಕನಿಗೆ ದಕ್ಕುವಳು- ಜಾಸ್ತಿ
ವರುಷವೆಲ್ಲ ಕಹಿಯುಂಡವನಿಗಿನ್ನಿಷ್ಟು
ಮತ್ತೇರಿಸುವಳು ಕಹಿಯೊಳಗಿನ ಮದಿರೆಯಾಗಿ
ಸೋತವ ಪಾಲಿನ ಅಮೃತಮಾಸವಿದು
ಇವಳೇ ಅಖಂಡ ಸುಖ
ಅಬ್ಬಾ ಅಂತೂ ಮುಗಿತಪ್ಪ ಬಿಕರಿಗಿಟ್ಟ ವರ್ಷ
ಬನ್ನಿ ದೋಸ್ತರೇ
ಪಾರ್ಟಿ ಮಾಡುವ
ಡಿಸೆಂಬರ್ ವೇಳೆಯಲ್ಲಿ
23ರ ಬೆನ್ನಿಗಂಟಿದ
ಟ್ಯಾಟೂ ಚಿತ್ತಾರವ
ಮರೆಯಲೆತ್ನಿಸುವ ಸಿನ್ಸಿಯರ್ರಾಗಿ

4
ಹೇ ಮಾಯಾಂಗನೇ
ಮತ್ತೆಂದೂ ಬರಬೇಡ ಹೀಗೆ
ನನ್ನೊಳಗಿನ ಮನುಷ್ಯತ್ವ
ಸತ್ತಕ್ಷಣ ದಾಖಲಾದ ಹಾಗೆ
ಯಾತನೆ ಇಲ್ಲಿ
ನಿನ್ನಾಗಮನ ವಿರಲಿ
ಇರುಳೆಂಬ ಒಡಕು ಬಟ್ಟಲ
ಒಳಗಣ ಅಸೀಮ ಸುಖದ
ಮದಿರೆಯಂತಲ್ಲಿ

ಡಾ. ರಶ್ಮಿ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಬ್ಬಗಾರದವರು
ಮಾನವ ಶಾಸ್ತ್ರಜ್ಞರು, ಆಪ್ತಸಮಾಲೋಚಕರು ಹಾಗೂ ಸಂಶೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ
“ಬುಡಕಟ್ಟು ಜನಾಂಗದ ಮನೋವೈಜ್ಞಾನಿಕ ಪರಂಪರೆ”ಯ ಕುರಿತು ಪಿ.ಎಚ್‌.ಡಿ ಮಾಡಿದ್ದಾರೆ.
ಲೆಕ್ಕಕ್ಕೆ ಸಿಗದವರು ಇವರ ಪ್ರಕಟಿತ ಕವನ ಸಂಕಲನ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ