ಪ್ರಕೃತಿ ಸುರಿಸಿತು ಕಣ್ಣೀರು
ಮನುಷ್ಯ
‘ತೊಯ್ದುಹೋಗಿದ್ದಾನೆ’
***
ನನಗೆ ಗೊತ್ತಿದೆ
ಮಳೆ ಪ್ರಿಯತಮೆಯಿದ್ದಂತೆ
ಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ
***
ಅಬ್ಬ! ಮಳೆ ಬಂತು
ಇನ್ನು ನನ್ನ ಕಣ್ಣೀರು
ಯಾರಿಗೂ ತಿಳಿಯುವುದಿಲ್ಲ
***
ದೇವರೂ ಅಳುತ್ತಾನೆ ನನ್ನಂತೆ
ಎಂದು ತಿಳಿದು ಸಮಾಧಾನವಾಯಿತು
ಮಳೆ ಬಂದಾಗ
***
ಮಳೆ ಬಂದಾಗ
ಕೊಡೆ ಮರೆತುಬಂದವನು
‘ನೆನೆದ’
![](https://kendasampige.com360degree.com/wp-content/uploads/2024/06/ಡಾ.-ವಿಶ್ವನಾಥ-ಎನ್-ನೇರಳಕಟ್ಟೆ-ಫೋಟೋ.jpg)
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.