ಒಂಟಿಯಾದಾಗ ಕೈಹಿಡಿಯುವ ಗುಲ್ಜಾರರು: ಗೊರೂರು ಶಿವೇಶ್ ಬರಹ
ಗುಲ್ಜಾರ್ ನಿರ್ಜೀವ ವಸ್ತುಗಳನ್ನು ಹೇಗೆ ರೂಪಕಗಳಿಂದ ನಿರೂಪಿಸುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು. ರಸ್ತೆಗಳು ನಡೆಯುತ್ತಲೇ ಇರುತ್ತವೆ… ಆದರೆ ವಾಸ್ತವವಾಗಿ ಎಲ್ಲಿಯೂ ಹೋಗುವುದಿಲ್ಲ… “ಖಾಲಿ ಪಾತ್ರೆಗಳಂತೆ ದಿನಗಳು ಉರುಳುತ್ತವೆ, ರಾತ್ರಿಗಳು ತಳವಿಲ್ಲದ ಬಾವಿಗಳು. ಕಣ್ಣುಗಳು ಕಣ್ಣೀರಿನ ಬದಲು ಹೊಗೆಯನ್ನು ಸೂಸುತಿವೆ. ಜೀವಿಸಲು ಕಾರಣಗಳಿಲ್ಲ, ಹೀಗಾಗಿ ಸಾಯಲು ಕಾರಣಗಳನ್ನು ಹುಡುಕುತ್ತಿರುವೆ. ಜೀವನಕ್ಕಿಂತ ಉದ್ದವಿರುವ ಈ ರಸ್ತೆಗಳು ಗುರಿ ಇಲ್ಲದೆ ಗುರಿಯನ್ನು ತಲುಪದೇ ಚಲಿಸುತ್ತಿವೆ..
ಗುಲ್ಜಾರ್ ಅವರ ಬರಹಗಳ ಕುರಿತು ಗೊರೂರು ಶಿವೇಶ್ ಬರಹ
ಭಾವೈಕ್ಯ ನಿಧಿ ಜಯದೇವ ಜಗದ್ಗುರುಗಳ ಘನ ವ್ಯಕ್ತಿತ್ವ: ರಂಜಾನ್ ದರ್ಗಾ ಬರಹ
ಶಿಕ್ಷಣದ ಮೂಲಕವೇ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುದು ಅವರ ದೃಢನಿರ್ಧಾರವಾಗಿತ್ತು. ಸಂಚಾರ ಕಾಲದಲ್ಲಿ ಭಕ್ತರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ವಿದ್ಯಾಪ್ರಸಾರಕ್ಕೆ ವಿನಿಯೋಗಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು. ಈ ಶಿಕ್ಷಣದ ಸೌಲಭ್ಯವನ್ನು ಬೇರೆ ಧರ್ಮಗಳ ಬಡವರಿಗೂ ದೊರೆಯುವಂತೆ ನೋಡಿಕೊಂಡರು.
ಜಯದೇವ ಜಗದ್ಗುರುಗಳ ೬೮ನೇ ವರ್ಷದ ಸ್ಮರಣೋತ್ಸವದ (ಅಕ್ಟೋಬರ್ ೨) ಸಂದರ್ಭದಲ್ಲಿ ಅವರ ಕುರಿತು ರಂಜಾನ್ ದರ್ಗಾ ಬರಹ ನಿಮ್ಮ ಓದಿಗೆ
ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ಆರ್: ಸಿದ್ದು ಹುಡೇದ ಬರಹ
ಇಂದು ರಾಷ್ಟ್ರೀಯ ಗ್ರಂಥಪಾಲಕರ ದಿನ. ಪುಸ್ತಕ/ಗ್ರಂಥಾಲಯಗಳು ಡಿಜಿಟಲೀಕರಣದ ಜೊತೆಗೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಕೊಡುಗೆಯ ಕುರಿತು ಸಿದ್ದು ಹುಡೇದ ಬರಹ ನಿಮ್ಮ ಓದಿಗೆ
ಗಿರೀಶ್ ಪರಂಗೋಡು ಇನ್ನಿಲ್ಲ…
ಹವ್ಯಾಸಿ ತಾಳಮದ್ದಲೆ ವಾದಕರಾಗಿ ಪ್ರಸಿದ್ಧರಾಗಿದ್ದ ಗಿರೀಶ್ ಪರಂಗೋಡು ಎರಡು ದಿನಗಳ ಹಿಂದಷ್ಟೇ ನಿಧನ ಹೊಂದಿದರು. ಅವರೊಂದಿಗಿನ ಒಡನಾಟದ ಕುರಿತು ಅವರ ಆಪ್ತ ಸ್ನೇಹಿತರಾದ ಗಣೇಶ್ ಭಟ್ ಬಾಯಾರು ಬರಹ…
ಮೆಲ್ಲಗೆ ಗದರುವ ನನ್ನ ಅಪರ್ಣೇ…: ನಾಗರಾಜ ವಸ್ತಾರೆ ಬರಹ
ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ. ಸುಮ್ಮನೆ ಶ್ರೋತೃವಾದೆ. ಬೀಳ್ಕೊಡುವಾಗ- ಸರ್, ಇವರು ನನ್ನ ಹಸ್ಬೆಂಡ್ ಅಂತ ಪರಿಚಯಿಸಿದಳು.
ನೆನ್ನೆ ರಾತ್ರಿ ತೀರಿಕೊಂಡ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕುರಿತು ಅವರ ಪತಿ, ಕತೆಗಾರ ನಾಗರಾಜ ವಸ್ತಾರೆ ಬರೆದಿದ್ದ ಬರಹವೊಂದು ನಿಮ್ಮ ಓದಿಗೆ
ಶ್ರುತಿ ಬಿ.ಆರ್. ಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’
ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು.
ಪಂ. ರಾಜೀವ ತಾರಾನಾಥರ ಬದುಕಿನ ಕೆಲವು ಪುಟಗಳು…
ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. “ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ…
ಪಂಡಿತ್ ರಾಜೀವ ತಾರಾನಾಥರ ಸಂಗೀತ-ಜೀವನದ ಕುರಿತು ಕತೆಗಾರ್ತಿ ಸುಮಂಗಲಾ ಬರಹ
ಅಪ್ಪಯ್ಯ ಎಂದರೆ….: ಇಂದಿರಾ ಜಾನಕಿ ಎಸ್. ಶರ್ಮ ಬರಹ
ಒಂದುದಿನ ಅಪ್ಪಯ್ಯ ‘ಚಂದಮಾಮ’ ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು …… ನೀವೂ ಚಂದಮಾಮ ಓದ್ತೀರಾ…?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ …. ಯಾರ ಮನೆ ಹಾಳುಮಾಡುವುದು… ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ…..!” ಅಂತ ಹೇಳಿದ್ದರು.
ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು…
ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪುರಸ್ಕಾರ: ಸುಧಾ ಆಡುಕಳ ಬರಹ
ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು.
ಈ ಸಲದ ನೊಬೆಲ್ ಶಾಂತಿ ಪುರಸ್ಕೃತ ನರ್ಗೆಸ್ ಮೊಹಮ್ಮದಿ ಅವರ ಕುರಿತು ಸುಧಾ ಆಡುಕಳ ಬರಹ