ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮಲೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಮೊರಸಾರ್ಸಕೆ….. ಮರಾ….ಕಲ್ಮುಳ್ಳು…. ಕಲ್ಮುಳ್ಳು…..: ಸುಮಾವೀಣಾ ಸರಣಿ
ಬಿದಿರಿನ ನಾನಾ ರೀತಿಯ ಮನೆ ಬಳಕೆ ವಸ್ತುಗಳು ಅಂದರೆ ಕುಕ್ಕೆ, ಗೂಡೆ, ಅನ್ನ ಬಸಿಯುವ ಚಿಬ್ಬಲು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಪಂಜರಗಳು ಆಧುನಿಕತೆ ಬಂದಂತೆ ಕಡಿಮೆಯಾಗುತ್ತಿವೆ. ಅದಕ್ಕೆ ಪರ್ಯಾಯವಾಗಿ ಮೇದಾರರು ಬಿದಿರಿನಲ್ಲಿಯೇ ಗೃಹಾಂಲಕಾರಿಕ ವಸ್ತುಗಳು ಅಂದರೆ ಹೂದಾನಿಗಳು, ಗೋಡೆಗೆ ಆನಿಸುವಂಥ ಫಲಕಗಳು ಇತ್ಯಾದಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತನೆಯ ಬರಹ ನಿಮ್ಮ ಓದಿಗೆ
ಕವಿ ಒಬ್ಬ ಎಂಜಿನಿಯರ್; ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999) ಕಾವ್ಯದ ಕುರಿತ ಬರಹ
ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ
ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಬೀಳ್ಕೊಡುಗೆ…: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಬೆಂಗಳೂರಿನ ಧ್ಯಾನ ಹೆಚ್ಚುತ್ತಿದ್ದಂತೆ, ಹೊರಡುವ ದಿನ ಸಮೀಪಿಸುತ್ತಿದ್ದಂತೆ ಗೆಳೆಯರ ಜೊತೆ ನೆಂಟರಿಷ್ಟರ ಜೊತೆ ಕಲ್ಪನಾ ಸಂಭಾಷಣೆಗೆ ಪ್ರಾರಂಭವಾಯಿತು. ಒಂದು ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಪರಿಚಿತ ಕಟ್ಟಡ ಸಂಕೀರ್ಣವೊಂದರ ಮುಂದೆ ನಿಂತಿದ್ದೆ. ಒಬ್ಬರು ಕೈ ಗಾಡಿಯಲ್ಲಿ ತಂದು ಟೀ, ಕೇಕ್, ಚಿಪ್ಸ್, ಸಿಗರೇಟ್ ಮಾರುತ್ತಿದ್ದರು. ಥೇಟ್ ನಮ್ಮ ಪೆಟ್ಟಿ ಅಂಗಡಿಯ ರೀತಿ, ದರ್ಶಿನಿ ಕೆಫೆಗಳ ರೀತಿ. ಇಂತಹದೊಂದು ದೃಶ್ಯವನ್ನೇ ನಾನು ಇಷ್ಟು ದಿನ ನೋಡಿರಲಿಲ್ಲ. ಇದು ಟಿಪಿಕಲ್ ಬೆಂಗಳೂರು ದೃಶ್ಯ. ಈ ದೃಶ್ಯವನ್ನು ನೋಡುತ್ತಾ ಸಂತೋಷ ಪಡುತ್ತಲೇ ನಾನು ನೆದರ್‌ಲ್ಯಾಂಡ್ಸ್‌ನಿಂದ ಬೀಳ್ಕೊಡುಗೆ ಪಡೆದು ಹೊರಡಬೇಕೆನ್ನಿಸಿತು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ
ನಮ್ಮನ್ನಗಲಿದ ಪ್ರೊ. ಮುಜಫ್ಫರ್ ಅಸ್ಸಾದಿ: ರಂಜಾನ್ ದರ್ಗಾ ಸರಣಿ
ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ. ಸ್ತ್ರೀವಾದದ ಕುರಿತು ಬರೆದಿದ್ದಾರೆ. ನಾಗರಹೊಳೆ ಬುಡಕಟ್ಟು ಜನರ ಪುನರ್ವಸತಿ ಕುರಿತು ಸಮಿತಿಯ ಮುಖ್ಯಸ್ಥರಾಗಿ ವರದಿ ಒಪ್ಪಿಸಿದ್ದಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯ ಎಡವಟ್ಟಿನ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ
ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ನಮ್ ಸೈಟ್ ಎಲ್ಲಿದೆ! : ಎಚ್. ಗೋಪಾಲಕೃಷ್ಣ ಸರಣಿಯ ಐವತ್ತನೆಯ ಕಂತು!
ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು
ಜೈಲು ಕಟ್ಟಿಸಿ ಬಂಧಿಗಳಾಗಿದ್ದು!: ಪೂರ್ಣೇಶ್ ಮತ್ತಾವರ ಸರಣಿ
ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್‌ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ