Advertisement
ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.
ಅನುಪಮಾ ಪ್ರಸಾದ್‌ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು

ತಮ್ಮ ನುರಿತ ಕಥನ ಕುಶಲತೆಯಿಂದ, ತಮ್ಮದೇ ಆದ ಕಥಾವಿಧಾನದಿಂದ ಅನುಪಮಾ ಪ್ರಸಾದ್ ಅವರನ್ನು ಕನ್ನಡ ಓದುಗರು ಈಗಾಗಲೇ ಬಲ್ಲರು. ಕಥೆ, ಕಾದಂಬರಿ ಮತ್ತು ವ್ಯಕ್ತಿಚಿತ್ರ ನಿರೂಪಣೆಗಳಲ್ಲಿ ಅನುಪಮಾ ತೋರಿರುವ ಗದ್ಯ ಪರಿಣತಿ ಅಪರೂಪದ ಬಗೆಯದು.
ಇದೀಗ ಪ್ರಕಟಿಸುತ್ತಿರುವ ‘ಚೋದ್ಯ’ ಕಥಾ ಸಂಕಲನವು ಈ ಅಂಶಗಳನ್ನು ಒಳಗೊಂಡು ಪಕ್ವತೆಯನ್ನು ಸಾಧಿಸಿದ ಕೃತಿಯಾಗಿದೆ. ಇಲ್ಲಿನ ಹದಿಮೂರು ಕಥೆಗಳು ತೆರೆದಿಡುವ ಲೋಕಾನುಭವ ವಿಶಿಷ್ಟ ಬಗೆಯದು. ವಿಭಿನ್ನ ವಸ್ತುವಿಷಯಗಳ ಆಯ್ಕೆ, ಭಾಷೆಯ ಮೇಲಿನ ಬಿಗಿಪು, ಕಥನ ಕ್ರಮ, ಕಥೆಯ ಒಳವಿವರಗಳು, ಪಾತ್ರಗಳ ಸಹಜ ಹಾಗೂ ನಿಯಂತ್ರಿತ ವರ್ತನೆ, ಕಟ್ಟೋಣದಲ್ಲಿ ತೋರುವ ಪರಿಣತಿ ಮತ್ತು ಪ್ರತಿ ಕಥೆಯೂ ತೋರುವ ಜೀವನ ಲೀಲಾವಿಲಾಸಗಳು ಅನುಪಮಾ ಅವರ ಕಥೆಗಳಿಗೆ ಈ ವಿಶಿಷ್ಟತೆಯನ್ನು ತಂದುಕೊಟ್ಟಿವೆ.

(ಅನುಪಮಾ ಪ್ರಸಾದ್‌)

ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು. ಬದುಕಿನ ಸಾರ್ಥಕತೆ-ನಿರರ್ಥಕತೆ, ಅಸಂಗತತೆ, ಅನಿವಾರ್ಯತೆ, ಅಂತಃಕರಣ-ನಿಸ್ಪೃಹತೆಗಳಂಥ ಬುನಾದಿ ಭಾವಗಳ ಕುರಿತು ಬಹುಕಾಲ ಚಿಂತಿಸಬಲ್ಲರು. ಕಥೆಗಳು ಗ್ರಾಮ, ನಗರ, ಚಿಕ್ಕ ಪಟ್ಟಣ ಹೀಗೆ ಎಲ್ಲಿಯೇ ಜರುಗಲಿ ಅವನ್ನು ಬಹುಪಾಲು ನಡೆಸಿಕೊಡುವುದು ಮಾತ್ರ ಹೆಣ್ಣು ಪಾತ್ರಗಳೇ. ಈ ಹೆಂಗಳೆಯರು ಓದುಗರಲ್ಲಿ ಮೇಲಿನ ಎಲ್ಲ ಭಾವಗಳನ್ನು ಹುಟ್ಟಿಸಿ ಮನಸ್ಸು ತೇವಗೊಳ್ಳುವಂತೆ ಮಾಡಬಲ್ಲರು.

ಸಂಕಲನದ ಕಥೆಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿವೆ. ಮೊಲ್ಲೆ ಹೂ ಮಾದೇವಿಯ ಮೀಮಾಂಸೆಗಳು, ಮೋಳಜ್ಜಿಯ ಚೋದ್ಯಗಳು, ಸ್ಯಾನಿಟರಿ ಪ್ಯಾಡ್, ಕಳಚಿದ ಬೇರು, ಕುಂತ್ಯಮ್ಮಳ ಮಾರಾಪು, ಮಥಾಯ್ ಡಾಕ್ಟರನ ಧರ್ಮಸಂಕಟ ಥರದ ಕಥೆಗಳು ಒಡ್ಡುವ ಅನುಭವ ಮತ್ತು ಪರಿಣಾಮ ಮೇಲುಸ್ತರದ್ದವು. ಹೆಚ್ಚಿಗೇನು, ಅನುಪಮಾ ಪ್ರಸಾದ್ ನಮ್ಮ ಕಾಲದ ವಿಶಿಷ್ಟ ಸಂವೇದನೆಯುಳ್ಳ ಲೇಖಕಿಯಾಗಿದ್ದಾರೆ. ಅವರು ಹೆಣ್ಣಾಗಿರುವುದರಿಂದ ಕಥೆಗಳಿಗೆ ಹೊಸಬಗೆಯ ಚೆಲುವು ಮತ್ತು ಜೀವನದೃಷ್ಟಿ ಪ್ರಾಪ್ತವಾಗಿವೆ. ಅವರ ಕಥೆಗಳಿಗೆ ನನ್ನಂಥವರು ಬರೆವ ಮಾತುಗಳು ಕೇವಲ ಔಪಚಾರಿಕ. ಇಂಥವುಗಳ ಅಗತ್ಯವಿಲ್ಲದೆ ಅವು ಸಹಜವಾಗಿ ಘಮಿಸುವಂಥವು.

(ಕೃತಿ: ಚೋದ್ಯ (ಕಥಾ ಸಂಕಲನ), ಲೇಖಕರು: ಅನುಪಮಾ ಪ್ರಸಾದ್‌, ಪ್ರಕಾಶಕರು: ಅಮೂಲ್ಯ ಪುಸ್ತಕ, ಬೆಲೆ: 185/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ