ಅನಿಲ್ ಗುನ್ನಾಪೂರ ಬರೆದ ಈ ಭಾನುವಾರದ ಕತೆ
ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ?
ಅನಿಲ್ ಗುನ್ನಾಪೂರ ಹೊಸ ಕಥಾ ಸಂಕಲನ “ಸರ್ವೇ ನಂಬರ್-೯೭” ದ “ಗೋಲ್‌ಗುಂಬಜ್ ಎಕ್ಸ್‌ಪ್ರೆಸ್” ಕತೆ ನಿಮ್ಮ ಓದಿಗೆ
ಪ್ರಾಣಪಕ್ಷಿಗಳು ಹಾರಿಹೋದವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನಂದಾ ಪ್ರಕಾಶ ಕಡಮೆ ಕತೆ
ವಿಶ್ವನಾಥನಿಗೆ ಸಹನೆಯ ಕಟ್ಟೆಯೊಡಯತೊಡಗಿತ್ತು. ‘ನೀವು ನಮ್ಮನ್ನು ಕರೆಸಿದ್ದು ನಿಮ್ಮ ಫೋನ್ ನಂಬರಿಗೆ ಲಾಟರಿ ಹತ್ತಿದೆ, ಬಹುಮಾನ ಗಳಿಸಿದ್ದೀರಿ ಬನ್ನಿ ಅಂತ, ಸುಮ್ಮನೇ ನಮ್ಮ ಬಹುಮಾನ ನಮಗೆ ಕೊಟ್ಟು ನಂತರ ಮಾತಾಡಿ, ನಾವು ನಮ್ಮ ಕೆಲಸ ಬೊಗಸೆ ಎಲ್ಲ ಬಿಟ್ಟು ಇಲ್ಲಿ ಬಂದಿದ್ದೇವೆ, ಕಂಪ್ಲೆಂಟು ಕೊಡ್ತೇನೆ ಕಂಪ್ಲೆಂಟು’ ಅಂತ ಎದ್ದು ನಿಂತು ದೊಡ್ಡ ದನಿಯಲ್ಲಿ ಕೂಗಾಡತೊಡಗಿದ್ದೇ, ಅಲ್ಲಿಯ ವ್ಯವಸ್ಥಾಪಕರು ಕಸಿವಿಸಿಗೊಂಡರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನಂದಾ ಪ್ರಕಾಶ ಕಡಮೆ ಕತೆ “ನೀರ ಮಣಿಗಳ ಮಾಲೆ”
ದಾರಿ ತಪ್ಪಿದ ಪ್ರೀತಿ ಬದುಕು ಕಟ್ಟಿಕೊಳ್ಳುವುದನ್ನು ತಪ್ಪಿಸುವುದೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಐದನೆಯ ಕಂತು ನಿಮ್ಮ ಓದಿಗೆ
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ
‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ.
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ “ಸುಳಿಹೊಳೆ ಕಥಾಧಾಮ” ನಿಮ್ಮ ಓದಿಗೆ
ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ
ಒಮ್ಮೆ ನಾವಿಬ್ಬರೂ ಮಾತನಾಡುವ ಪ್ರಸಂಗ ಬಂದಾಗ ನಾನು ನನ್ನ ಕುಲದ ಬಗ್ಗೆ ಹೇಳಿದೆ; ಆ ಸಾಂಪ್ರದಾಯಿಕ ಬೇಲಿಯನ್ನು ಹಾರಬೇಕೆಂಬ ಆಸೆಯನ್ನು ತೋಡಿಕೊಂಡೆ. ಬಿಸಿ ರಕ್ತ, ವಿಚಾರವಂತಿಕೆಯ ಮೆದುಳು ಅವನಿಗೆ ಬಲ ತುಂಬಿತ್ತು. ಊರಿನ ಹಿರೀಗೌಡನಾದರೋ ಸರ್ವಾಂಗ ಸುಂದರಿ-ತೊಳೆದ ಮುತ್ತಿನಂತಿದ್ದ ನನ್ನನ್ನು ನೋಡಿ ಜೊಲ್ಲು ಸುರಿಸಿದ್ದು ತಿಳಿದ ದಿನ ಮೈಮೇಲೆ ಹಾವು-ಚೇಳು ಹರಿದಂತಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ “ನಾ ಸಾಯಬೇಕು…”
ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ
ಡಾ. ದಿಲೀಪ್ ಕುಮಾರ್ ಎನ್.ಕೆ. ಬರೆದ ಈ ಭಾನುವಾರದ ಕತೆ
ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ.
ಡಾ. ದಿಲೀಪ್ ಕುಮಾರ್ ಎನ್.ಕೆ. ಬರೆದ ಈ ಭಾನುವಾರದ ಕತೆ “ಸುಟ್ಟಿರದೇ ಮೂರ್ ದ್ವಾಸ…” ನಿಮ್ಮ ಓದಿಗೆ