Advertisement

Month: January 2025

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು.
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕೀರ್ತಿ ಅವರ ಪ್ರಬಂಧಗಳ ಸಂಕಲನ “ಮಳೆ”ಯ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಉರಿದು ಮುಗಿದುಬಿಡುವುದಲ್ಲ ಪ್ರೀತಿ: ಎಸ್. ನಾಗಶ್ರೀ ಅಜಯ್ ಅಂಕಣ

ಓದಿ, ಬರೆದು, ಕಣ್ತೆರೆದು ಪ್ರಪಂಚ ನೋಡಿ, ತಿಳಿದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೇಮದ ಹೆಸರಿನಲ್ಲಿ ಹುಚ್ಚಾಟಗಳಿಗೆ ಪಕ್ಕಾಗಿ, ನಮ್ಮನ್ನೇ ನಿಭಾಯಿಸಿಕೊಳ್ಳಲು ಬಾರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು ನಿಭಾಯಿಸುವ, ಸಂಬಂಧ ಬೆಸೆಯುವ ಸಾಹಸ ಬೇಕಿದೆಯೆ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಹಿಡಿಯಷ್ಟು ಪ್ರೀತಿ ಕಡಲಿನಷ್ಟಾಯ್ತು: ಮಹಾಲಕ್ಷ್ಮೀ. ಕೆ. ಎನ್. ಬರಹ

ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು.
ಪ್ರೇಮಿಗಳ ದಿನಕ್ಕೆ ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣ

Read More

ಫಾಲ್ಗುಣ ಮತ್ತು ಪ್ರೇಮ: ಕೆ. ಎನ್. ಲಾವಣ್ಯ ಪ್ರಭಾ ಬರಹ

ಹೆಜ್ಜೆ ಮೇಲೊಂದು ಹೆಜ್ಜೆ ಇರಿಸುತ್ತಲೇ ಮೂರು ದಾರಿಗಳು ಕೂಡುವ ಬೀದಿಯ ತಿರುವಲ್ಲಿ ಬಂದು ನಿಂತು ಮಂದಹಾಸದಲ್ಲಿ ಉಸಿರನ್ನೊಮ್ಮೆ ದೀರ್ಘವಾಗಿ ಒಳಗೆಳೆದುಕೊಂಡು ಹೊರಗೆ ಚೆಲ್ಲುತ್ತಾ ಹಗೂರಾಗಿ… ಸಾಗಿ ಬಂದ ದಾರಿಯಲ್ಲೊಮ್ಮೆ ಇಣುಕುತ್ತಾಳೆ. ಬೆನ್ನಹಿಂದಿನ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಮುಂದಿನ ಹೆಜ್ಜೆ ಇಡುವ ಅವಳ ನಡೆ ಬಹುಶಃ ಅವಳಿಗೆ ಮಾತ್ರ ಒಲಿದ ಕಲೆಯೇನೋ.. ಅವಳ ಎಡ ತೋಳಿನೆಡೆ ಒಂದು ದಾರಿ, ಬಲ ತೋಳಿನೆಡೆ ಮತ್ತೊಂದು ದಾರಿ ಮತ್ತು ಅವಳು ಸಾಗಿ ಬಂದ ದಾರಿ ಅವಳೆದುರಿನಲ್ಲೇ.
ಕೆ. ಎನ್. ಲಾವಣ್ಯ ಪ್ರಭಾ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ