Advertisement

Month: January 2025

ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ

ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಕ್ಲಾಸು ಮಾತ್ರ ಮೂರು; ಕಲಿತ ಪಾಠ ನೂರಾರು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಶನಿವಾರ ಭಾನುವಾರದಂದು ಹಸಿರು ಜೀರುಂಡೆಯನ್ನು ಒಂದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಂಡು ಅದಕ್ಕೆ ಚೆಂಡು ಹೂವಿನ ಎಲೆಗಳನ್ನು ತಿನ್ನಲು ಇಟ್ಟು ಆಗಾಗ್ಗೆ ಅದು ಎಷ್ಟು ತಿಂದಿತು ಎಂದು ನೋಡುತ್ತಿದ್ದೆ. ನಾನು ಅದನ್ನು ಸಾಕುತ್ತಿದ್ದೇನೆ. ಇಲ್ಲ ಅಂದ್ರೆ ಅದು ಬದುಕಲು ಕಷ್ಟ ಇತ್ತು ಎಂಬ ಭಾವದಿಂದ ಅದನ್ನು ಇಟ್ಟುಕೊಂಡಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಶಾಂತಾ ಜಯಾನಂದ್ ಬರೆದ ಈ ದಿನದ ಕವಿತೆ

“ರೇಖಾಗಣಿತ ಈಗಷ್ಟೆ
ಬದುಕಿನ ಪಾಠ
ಆರಂಭಿಸಿದೆ,
ಇತಿಹಾಸ ಗತ ಸೇರಿದೆ,
ವ್ಯಂಜನ, ಸ್ವರ, ವ್ಯಂಜನಗಳು
ಅರ್ಥೈಸಿಕೊಳ್ಳದೆ ಸೋತಿವೆ,”- ಶಾಂತಾ ಜಯಾನಂದ್ ಬರೆದ ಈ ದಿನದ ಕವಿತೆ

Read More

ರಾಜಾ ಶೈಲೇಶಚಂದ್ರ ಗುಪ್ತ- ಕರ್ತವ್ಯನಿಷ್ಠೆಯ ಪ್ರತೀಕ: ರಂಜಾನ್ ದರ್ಗಾ ಸರಣಿ

ತಾವು ಸೇವೆ ಸಲ್ಲಿಸುವ ಪತ್ರಿಕೆ ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪತ್ರಿಕಾ ಮಾಲೀಕರ ಬಗ್ಗೆ ಅವರಿಗೆ ಅಪಾರವಾದ ಗೌರವ. ಅವರು ಮಾಲೀಕರಿಗೆ “ಖಾವಂದರು” ಎಂದು ಕರೆದಾಗ ನಾಕು ನಕ್ಕಿದ್ದೆ. ಮಾಲೀಕರು ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ತಮಗಾದ ಅನ್ಯಾಯದ ಬಗ್ಗೆ ಅವರು ಎಂದೂ ಮಾಲೀಕರ ಮುಂದೆ ಉಸುರಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 70ನೇ ಕಂತು ನಿಮ್ಮ ಓದಿಗೆ

Read More

ಲಂಡನ್‌ ಮತ್ತು ಟಿಪ್ಪೂ ಸುಲ್ತಾನ್: ಜೆ. ಬಾಲಕೃಷ್ಣ ಬರಹ

ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನ’ ಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‌ಗೆ ಒಪ್ಪಂದವೊಂದರೆ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ