Advertisement

Month: January 2025

ಎದೆ ಸೀಳಿತು ಕೆಂಪುಲಾವದ್ಹಕ್ಕಿ…: ಗೋಳೂರ ನಾರಾಯಣಸ್ವಾಮಿ ಬರಹ

“ಪ್ರೀತಿಸುವುದಕ್ಕಿಂತ ಕ್ರಾಂತಿಯಾವುದಾದರೂ ಇದಿಯಾ; ನನ್ನ ಕವಿತೆ ಇದನ್ನಷ್ಟೇ ಬಯಸುತ್ತದೆ” ಎನ್ನುವಾಗ, ಜಂಬೂದ್ವೀಪದ ಅಪ್ಪ ಅವ್ವ ಅನ್ನ ಉತ್ಪಾದಿಸುವ ಘನಕಾರ್ಯಕ್ಕೆ ಕಣ್ಣು ಬಂದು, ಅದೆಲ್ಲೋ ಬಲೂನು ಮಾರುತ್ತಿರುವ ಬಡಜನರ ಮೇಲೆ ದೃಷ್ಟಿ ಹಾಯಿಸುತ್ತಾ ಇರುತ್ತದೆ. ಒಂದೇ ಮನೆಯಲ್ಲಿದ್ದು, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಜನರೇ ಹಣ, ಆಸ್ತಿ ಆಸೆಗಾಗಿ ಸಾವನ್ನೇ ಕತ್ತು ಹಿಸುಕಿ ಕೊಲ್ಲುತ್ತಿರುವಾಗ, ಬಡಜನರ ಬಗ್ಗೆ ದನಿಯಾಗಬೇಕೆಂಬ ಇವರ ಹುಂಬುತನಕ್ಕೆಷ್ಟೊಂದು ಧೈರ್ಯವಿರಬೇಕು ಎಂದುಕೊಳ್ಳುವಾಗಲೆ, ಅದಕ್ಕವರು ಉತ್ತರವಾಗಿ ‘ನದಿಗೆ ತಡೆಯೊಡ್ಡಬಹುದು, ಬತ್ತಿಸಲಾಗುವುದೇ ಒಳಗಿನ ಒರತೆ” ಎಂದುಬಿಡುತ್ತಾರೆ.
ಎಸ್.ಕೆ. ಮಂಜುನಾಥ್‌ ಕವನ ಸಂಕಲನ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕುರಿತು ಗೋಳೂರ ನಾರಾಯಣಸ್ವಾಮಿ ಬರಹ

Read More

ನಮ್ಮನೆಯ ಅಷ್ಟೈಶ್ವರ್ಯ: ಚಂದ್ರಮತಿ ಸೋಂದಾ ಸರಣಿ

ಹೊಸ ಬಡಾವಣೆಗೆ ವಾಸಕ್ಕೆ ಬಂದವರಿಗೆ ಯಾವ್ಯಾವ ಬಗೆಯಲ್ಲಿ ಇಲಿ ಕಾಟಕೊಡುತ್ತದೆ ಅನ್ನೋ ವೈವಿಧ್ಯಗಳ ಪರಿಚಯ ಮಾಮೂಲು. ನಮ್ಮೂರುಗಳಲ್ಲಾದರೆ ಒಂದು ಬೆಕ್ಕು ಸಾಕಿದರೆ ಆಯಿತು. ಇಲಿಕಾಟ ತಪ್ಪಿತು ಅಂತನೇ ಅರ್ಥ. ಆದರೆ ನಗರದಲ್ಲಿ ಬೆಕ್ಕು ಸಾಕೋದು ಅಂದರೆ ಸಂನ್ಯಾಸಿ ಸಂಸಾರದಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಮಲ್ಲೇಶ್ವರಂ ರಸ್ತೆಯ ನೆನಪುಗಳು..: ಎಚ್. ಗೋಪಾಲಕೃಷ್ಣ ಸರಣಿ

ಲಾ ಕ್ಲಾಸಿನ ನಂತರ ಬೇಕಾದಷ್ಟು ಸಮಯ ಸಿಕ್ತಾ ಇತ್ತಲ್ಲಾ. ಆಗ ಮಾರ್ನಿಂಗ್ ಶೋ ಸಿನಿಮಾ ಮತ್ತು ಹಳೇ ಪುಸ್ತಕದ ಅಂಗಡಿ ಭೇಟಿ. ಹೀಗೆ ಸುಮಾರು ಪುಸ್ತಕ ಕೊಂಡಿದ್ದೆ ಮತ್ತು ಸೇರಿತ್ತು. ಅವನ್ನೆಲ್ಲಾ ಸೆಕೆಂಡ್ ಶಿಫ್ಟ್‌ನಲ್ಲಿ ಫ್ಯಾಕ್ಟರಿಯಲ್ಲಿ ಓದ್ತಾ ಇದ್ದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಖಾಲಿ ಪುಟದಲ್ಲರಳುವ ಕಾಮನಬಿಲ್ಲು: ರಾಮ್ ಪ್ರಕಾಶ್ ರೈ ಕೆ. ಸರಣಿ

ಈ ಕಥೆಯು ಅನಂತ ಪಲಕುಗಳ ಕಾಪಿ ರಾಗದಂತೆ ಕಾಡುತ್ತದೆ. ಕಲಿತು ಪಟ್ಟಣದಲ್ಲಿ ಕೆಲಸಕ್ಕೆ ಸೇರುವ ಮಕ್ಕಳ ತಂದೆ ತಾಯಿಯಂದಿರ ನೋವಿನ ಶಾಯರಿಯಿದು. ವಯೋ ಸಹಜ ಗಜಿ ಬಿಜಿಗಳು ಬಾಂಬೆಯ ಲೋಕಲ್ ಟ್ರೈನ್‌ನಲ್ಲಿನ ಜನರಂತೆಯೇ ಮನದಲ್ಲಿ ತುಂಬಿದ್ದರೂ ಅವನ್ನೆಲ್ಲಾ ಮೀರಿ ಪ್ರೀತಿಯೊಂದಿರೆ ಸಾಕು ಜೀವಕ್ಕೆ ಎಂದು ಬದುಕುವ ಲೋಕದ ಎಲ್ಲಾ ತಂದೆ ತಾಯಿಯರ ಅಂತರಾಳವಿದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಅಮೃತವಾಹಿನಿಯೊಂದು ಹರಿಯುತಿದೆ: ಸುಧಾ ಆಡುಕಳ ಅಂಕಣ

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ