Advertisement

Month: January 2025

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಕಣ್ಣೀರ ಕುಡಿಯುವ ಹೃದಯಕ್ಕೆಲ್ಲಿ
ಜಾಗವಿದೆ
ಮತ್ತೇನನ್ನೊ ಅರುಹಿ
ನಿನ್ನನ್ನೇ ನೀನು ಕಳೆದುಕೊಳ್ಳುತ್ತಿಯಾ
ಅರ್ಥ ಅನರ್ಥಗಳ ಜಾಡಿನಲ್ಲಿ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

‘ಅವಳ ಪಥ’ದ ಹಲವು ಪದರಗಳು: ಡಾ. ಎಲ್.ಜಿ. ಮೀರಾ ವಿಮರ್ಶೆ

ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ.
ಚೇತನಾ ಹೆಗಡೆ `ಅವಳ ಪಥ’ ಕೃತಿಯ ಕುರಿತು ಡಾ. ಎಲ್.ಜಿ. ಮೀರಾ ಬರಹ ನಿಮ್ಮ ಓದಿಗೆ

Read More

ರಾಜಕ್ಕಳ ನಿರ್ಧಾರ…!: ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ

“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ “ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ.
ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಅಂಕ ಮತ್ತು ಮಕ್ಕಳ ಮನೋಲೋಕ..: ಅನುಸೂಯ ಯತೀಶ್ ಸರಣಿ

ನೋಡಿ ಇದು ಸಣ್ಣ ವಿಷಯವೇ ಇರಬಹುದು. ಆದರೆ ಮಕ್ಕಳ ಮನೋ ಲೋಕವನ್ನ ಚಿತ್ರಿಸುವ ಸೂಕ್ಷ್ಮ ವಿಚಾರ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೇ ಪೋಷಕರಿಗೆ ಹೆದರಿ ಟೀಚರ್‌ಗೆ ಯಾಮಾರಿಸಿ ಮೋಸ ಮಾಡುತ್ತಾನೆ ಎಂದರೆ ಶಿಕ್ಷೆಗೆ ಎಷ್ಟು ಭಯವಿರುತ್ತದೆ. ಇದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಶಿಕ್ಷೆಯೇ ಎಲ್ಲದಕ್ಕೂ ಪರಿಹಾರವಲ್ಲ. ಇದನ್ನು ಮನಗಂಡಿರುವುದರಿಂದಲೇ ಶಿಕ್ಷಣ ಇಲಾಖೆ ಶಿಕ್ಷೆ ರಹಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಹಸಿರು ತೋರಣದ ನಡುವೆ ನೆನಪ ಚಿಗುರು: ಮಾರುತಿ ಗೋಪಿಕುಂಟೆ ಸರಣಿ

ಹೆಣ್ಣು ಮಕ್ಕಳ ಸಂಭ್ರಮಕ್ಕೆ ಯಾವ ಕೊರತೆಯೂ ಇರಲಿಲ್ಲ. ಊರ ಹೊರಗಿನ ಹುಣಸೆ ಮರ, ಕೆಂಕೆಸ್ರು ಮರ ‘ಆಲದ ಮರಕ್ಕೆ, ಹಗ್ಗ ಕಟ್ಟಿ ಜೋಕಾಲಿ ಆಡುವುದನ್ನು ನೋಡುತ್ತಿದ್ದೆವು. ಬಿದ್ದಾರು ಎಂಬ ಕಾರಣಕ್ಕೆ ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಬುಗುರಿ ಚಿನ್ನಿದಾಂಡು ಇಂತಹವುಗಳಲ್ಲಿ ನಾವು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ