Advertisement

Month: January 2025

ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ: ಅನುಸೂಯ ಯತೀಶ್ ಸರಣಿ

ಅಂತೂ ಇಂತೂ ಇಪ್ಪತ್ತು ಕಿಲೋ ಮೀಟರ್ ದೂರದಿಂದ ಹಿಂದೆ ಹಿಂದೆಯೇ ಬಂದ ಕಾರು ನಮ್ಮ ಬೈಕನ್ನು ಅಡ್ಡಗಟ್ಟಿ ನಿಂತೆ ಬಿಟ್ಟಿತು. ನನಗಂತೂ ಕೈ ಕಾಲುಗಳಲ್ಲಿ ನಡುಕ ಶುರುವಾಯಿತು. ನಾವೇನ್ ತಪ್ಪು ಮಾಡಿದ್ದೇವೆ? ಎಂಬ ಪ್ರಶ್ನೆಗಳ ಬಾಣಕ್ಕೆ ತಲೆ ಸಿಡಿಯುವಂತಾಯಿತು. ನಾನು ಬೈಕ್‌ನಿಂದ ಇಳಿಯದೆ ಯತೀಶ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿ ಹಾಗೇ ಕೂತೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಬೇಸಿಗೆ ದಿನಗಳ ಆಟದ ನೆನಪುಗಳು…: ಮಾರುತಿ ಗೋಪಿಕುಂಟೆ ಸರಣಿ

ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ. ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು; ಸಹಾಯಕ್ಕೆ ದೊಡ್ಡಮ್ಮ ಇದ್ದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಬೆಂಕಿ ಮತ್ತು ಹೂವು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ. ರಘುನಾಥ ಬರೆದ ಕತೆ

ಹಿಂದೆ ಅವನು ಜಬರದಸ್ತಿಯಲ್ಲ ಇಸಿದುಕೊಂಡಿದ್ದ ಇನ್ನೂರು ರೂಪಾಯಿಗಳನ್ನು ಜ್ಞಾಪಿಸಿ, ಈಗ ಬಂದಿರುವುದು ಎಪ್ಪತ್ತೈದೆಂದು ಹೇಳಿ, ಇದು ಜಾತ ಒಂದುನೂರ ಇಪ್ಪತ್ತೈದು ನಿನ್ನಿಂದ ಬರಬೇಕೆಂದು ಕ್ಲೇಮು ಮಾಡಿದೆ. ಕೊಡುವನೇನೊ ಎಂಬ ದೂರದ ನಿರೀಕ್ಷೆಯಲ್ಲಿ. ಆದರೆ ಅವನು ಹೂಡಿದ ತರ್ಕವೆ ಆ ನಿರೀಕ್ಷೆಗೆ ಮಣ್ಣು ಹಾಕಿತು. ‘ಕ್ಯಾಸ್ಟು ಸರ್ಟಿಪೇಟುಕೇ ಇನ್ನೂರಾಗದೆ. ಅದನ್ಯಾರು ಕೊಡೋರು’ ಅಂದ.
ʼನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಸ. ರಘುನಾಥ ಬರೆದ ಕತೆ

Read More

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು ಹಾಗೆ ಚಿತ್ರಿಸಲು ಪ್ರಯತ್ನಿಸುವುದು, ಚಂದಮಾಮ ಪತ್ರಿಕೆಯ ಚಿತ್ರಗಳನ್ನು ಚಿತ್ರಿಸುವುದು, ಪತ್ರಿಕೆಗಳಲ್ಲಿ ಬರುವ ಗಾಂಧಿ, ಶ್ರವಣಬೆಳಗೊಳದ ಬಾಹುಬಲಿ ಮೊದಲಾದ ಚಿತ್ರಗಳನ್ನು ನೋಡಿ ನಕಲು ಮಾಡಿ ಚಿತ್ರಿಸುವುದರ ಮೂಲಕ ನಡೆದಬಂದರು. ಕೆ. ವಿ. ಸುಬ್ರಹ್ಮಣ್ಯಂರವರಿಗೆ ಈ ಆಸಕ್ತಿ 7-8ನೇ ತರಗತಿಗಳಲ್ಲಿ ಶುರುವಾಗಿತ್ತು.
ಕಲಾ ವಿಮರ್ಶಕ ಕೆ.ವಿ. ಸುಬ್ರಮಣ್ಯಂ ಅವರ ಕುರಿತು ಹರಿಶ್ರೀ ವೈ.ಜೆ. ಬರೆದ “ಚಿತ್ರಾಕ್ಷರ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ