Advertisement

Month: January 2025

ಗ್ರೀನ್ ಕಾರ್ಡ್ ಎನ್ನುವ ದೇವರು: ಎಂ.ವಿ. ಶಶಿಭೂಷಣ ರಾಜು ಅಂಕಣ

ಎಷ್ಟೋ ಸಲ ಸ್ವದೇಶಕ್ಕೆ ಹಿಂತಿರುಗುವ ಎನ್ನುವ ಅನಿಸಿಕೆ ಮೂಡುತ್ತದೆ, ಅದೊಂದು ಅನಿಸಿಕೆ ಅಷ್ಟೆ. ಅಮೇರಿಕಾದ ಜೀವನ ಶೈಲಿ, ಉತ್ತಮ ಜೀವನ, ತಮ್ಮ ಪಾಡಿಗೆ ತಾವು ಜೀವಿಸಲು ಇರುವ ಪ್ರಾಮುಖ್ಯತೆ, ಸರ್ಕಾರಿ ಕಚೇರಿಗಳಲ್ಲಿ ಇರದ ಲಂಚದ ಹಾವಳಿ, ಗುಣಮಟ್ಟದ ಆಹಾರ, ಎಲ್ಲಕಿಂತ ಹೆಚ್ಚಾಗಿ ತವರಲ್ಲಿ ಸಿಗುವ ಗೌರವ ಮುಂತಾದುವುಗಳನ್ನು ಬಿಡಲು ಮನಸಾಗದೆ ಅಮೆರಿಕೆಯಲ್ಲಿಯೇ ಕೊನೆಯವರೆಗೂ ಜೀವನ ಸಾಗುವುದು.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”

Read More

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

Read More

ಮಾಮರವೆಲ್ಲೋ.. ಕೋಗಿಲೆಯೆಲ್ಲೋ.. : ಗುರುಪ್ರಸಾದ ಕುರ್ತಕೋಟಿ ಸರಣಿ

ಪ್ರಥಮ ಬಾರಿ ಹೀಗೊಂದು ಅಲಾರಂ ನಮ್ಮನ್ನು ಧೃತಿಗೆಡಿಸಿತ್ತು. ಏನಾಗುತ್ತೋ ಅಂತ ಭಯದ ಜೊತೆಗೆ ಒಂದೇನೋ ಕುತೂಹಲವೂ ಇತ್ತು. ಆದರೆ ಅದೃಷ್ಟವಶಾತ್ ಆ ಸುಂಟರಗಾಳಿ ನೆಲಕ್ಕೆ ಮುಟ್ಟದೆ ಬೇರೆ ಎಲ್ಲೋ ಹೆದರಿಸಲು ಹೋಗಿತ್ತು. ಇಷ್ಟಕ್ಕೆ ಯಾಕೆ ಇಷ್ಟು ಭಯ ಬೀಳಿಸಿದರು ಅಂತ ಯೋಚಿಸಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ಚಿಗುರು, ಮಳೆ ಮತ್ತು ಒಲವು…: ಮಹಾಲಕ್ಷ್ಮಿ ಕೆ. ಎನ್. ಬರಹ

ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.
ಮಹಾಲಕ್ಷ್ಮಿ ಕೆ. ಎನ್.‌ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ