Advertisement

Month: January 2025

ಯುಗಾದಿ ಸಂಭ್ರಮ: ಸುಮಾವೀಣಾ ಸರಣಿ

ಮಾನವನ ಜೀವನ ಸುಖ-ದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವು-ಬೆಲ್ಲ ಸೇವನೆಯ ಸಂಕೇತ. ಭಗವದ್ಗೀತೆಯಲ್ಲಿಯೂ ಸಹ “ಸುಖದುಃಖೇ ಸಮೇಕೃತ್ವಾ” ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮದಿಂದಲೇ ಸ್ವೀಕರಿಸಬೇಕು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ

ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

Read More

ಖರ್ಚಿಲ್ಲದ ಆಟಿಕೆಗಳು, ಸರ್ಕಸ್ ಕಂಪೆನಿ… ಆ ನೆನಪುಗಳು..: ಬಸವನಗೌಡ ಹೆಬ್ಬಳಗೆರೆ ಸರಣಿ

ಏಳನೇ ತರಗತಿಗೆ ಹೋಗುವ ವೇಳೆಗೆ ನಾನು ಓದುವುದರಲ್ಲಿ ತರಗತಿಗೇ ಮೊದಲಿಗನಾಗಿದ್ದೆ. ಅದರಲ್ಲೂ 7 ನೇ ತರಗತಿಯಲ್ಲಿ ಬುಡೇನ್ ಸಾಬ್ ಮೇಷ್ಟ್ರು ಗಣಿತ ತೆಗೆದುಕೊಂಡ ಮೇಲೆ ನನಗೆ ಗಣಿತ ತುಂಬಾ ಇಷ್ಟದ ವಿಷಯವಾಯಿತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಎಷ್ಟು ಬೆರಗು ಈ ಪ್ರಕೃತಿಯಲಿ…: ಆಶಾ ಜಗದೀಶ್ ಅಂಕಣ

ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಅವರು ನನ್ನ ಕಣ್ಣಲ್ಲಿ ಹನಿಯಾದರು: ರಂಜಾನ್ ದರ್ಗಾ ಸರಣಿ

ಒಂದು ಸಲ ಒಬ್ಬ ಗಿರಾಕಿ ಬಂದ. ಆಗ ನಾವು ಬಾಗಿಲ ಬಳಿ ನಿಂತಿದ್ದೆವು. ಅವನು ಏನೋ ಮಾತನಾಡುತ್ತ ‘ನಿಮ್ಮ ಚಪ್ಪಲಿ ಚೆಂದ ಅದಾವು’ ಎಂದು ಹೇಳಿದ. ಆಗ ಅವರು ‘ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ವಿಚಿತ್ರ ಎನಿಸಿತು. ಅವನಿಗೆ ಇನ್ನೂ ವಿಚಿತ್ರ ಎನಿಸಿ ಗಾಬರಿಯಾದ. ‘ನಿಮಂಥ ಗಿರಾಕಿಗಳು ನಮ್ಮ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಿದಾಗ. ಇದೆಲ್ಲ ದಕ್ಕಿದ್ದು’ ಎಂದು ಮಾಮಾ ಹೇಳಿದಾಗ ಅವನಲ್ಲಿ ಹೆಮ್ಮೆ ಮೂಡುವ ಬದಲು ಕೃತಜ್ಞತಾ ಭಾವ ಮೂಡಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ