Advertisement

Month: January 2025

ಸಂಪಿಗೆಯ ಹಾದಿ, ಸಂಸ್ಕೃತಿಯ ಬೀದಿ: ಎಚ್. ಗೋಪಾಲಕೃಷ್ಣ ಸರಣಿ

ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಪುನೀತ್ ಸಾಕ್ಯ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ಪುನೀತ್ ಸಾಕ್ಯ. ನೀನಾಸಂ ಪದವೀಧರರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಗಭೂಮಿ ಮತ್ತು ಸಿನಿಮಾ ನಿರ್ದೇಶನ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

“ಹೆಂಗಳೆಯರ ಮೊಗದಲಿ
ನಗುವ ತರಿಸಲು
ಬಾಡಿದ ಹೂಗಳಿಗೆ
ನವಚೈತನ್ಯ ತುಂಬಲು
ಬಂದಿರಬಹುದೇ
ಈ ಯುಗಾದಿ!”-ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

Read More

ಹೊಳೆಸಾಲಿನ ಶಾಲೆಗೆ ಇನ್ನೀಸಬೆಟ್ಟರ್ ಬಂದರು: ಸುಧಾ ಆಡುಕಳ ಅಂಕಣ

ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸೈಕಲ್ ಬೆಲ್ ಮಾಡುತ್ತಾ, ಸಮತಟ್ಟುಗೊಳಿಸಿದ ಮೈದಾನದ ತುಂಬಾ ಸೈಕಲ್ ಹೊಡೆಯುತ್ತ ಮಕ್ಕಳೆಡೆಗೆ ಕೈ ಬೀಸಿದರು. ಅವರ ಮುಗುಳ್ನಗೆಗೆ ಮನಸೋತ ಮಕ್ಕಳು ಹೋ ಎಂದು ಕೂಗುತ್ತಾ ಅವರ ಸೈಕಲ್ಲಿನ ಹಿಂದೆಯೇ ಹುಚ್ಚೆದ್ದು ಓಡತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

“ಸೂರ್ಯ ದೇವನ ನಗು
ಜೀವಸಂಕುಲ ತತ್ತರ
ಮಾರುತ ಕಳೆದು ಹೋಗಿದ್ದಾನೆ
ಬದಲಾಯಿತೆ ನೀರದ ನಕ್ಷೆ
ಬೇವು ಬೆಲ್ಲ ನಿಜವೇ
ಯುಗಾದಿ ಪುರುಷ
ನಿನ್ನೊಂದಿಗೆ ಕರೆದು ತಾ
ವರುಣನನ್ನೂ ಮಹಾರಾಯ” -ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ