Advertisement

Month: January 2025

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ

ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ “ಫ್ರಿಜ್ಜು”

Read More

ಅಮೇರಿಕಾ ಜೀವನ ತತ್ವ: ಎಂ.ವಿ ಶಶಿಭೂಷಣ ರಾಜು ಅಂಕಣ

ಅಮೇರಿಕಾದಲ್ಲಿ ಹಣಕ್ಕೆ ಮಹತ್ವ ಹೆಚ್ಚಿದೆ. ಎಲ್ಲವೂ ದುಬಾರಿ. ಹೋಟೆಲ್‌ನಲ್ಲಿ ಸ್ನೇಹಿತರು ತಿಂಡಿಗೋ, ಊಟಕ್ಕೋ ಹೋದರೆ ಬಿಲ್ಲನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ, ಒಬ್ಬರೇ ಕೊಡಲು ಬಿಡುವುದಿಲ್ಲ. ಯಾವುದೇ ಪ್ರದೇಶಕ್ಕೆ ಹೋದಾಗ, ಪ್ರವಾಸಕ್ಕೆ ಹೋದಾಗ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಯಾರದಾದರೂ ಮನೆಗೆ ಹೋದಾಗ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಬೆರಳ ಹಿಡಿದು ಮುನ್ನಡೆಸು ಬುದ್ಧ..: ಅನುಸೂಯ ಯತೀಶ್ ಬರಹ

ಇಲ್ಲಿ ಕವಿಯು ಮಾನವನ ಸಹಜ ಗುಣಗಳನ್ನು ಬುದ್ಧನಿಗೆ ಹೋಲಿಸುತ್ತಾ ವಿಡಂಬನಾತ್ಮಕ ರೂಪದಲ್ಲಿ ಈ ಕವಿತೆಗೆ ಜೀವ ತುಂಬಿದ್ದಾರೆ. ಬುದ್ಧನ ನಡೆನುಡಿಗಳೆ ಕವಿತೆಯ ಜೀವಾಳವಾಗಿವೆ. ಇಲ್ಲಿ ವಸ್ತುನಿಷ್ಠೆಗಿಂತ ವ್ಯಕ್ತಿತ್ವದ ಅನಾವರಣಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ರೂಪಕಗಳ ಪ್ರಯೋಗದಲ್ಲಿ ಸಿದ್ಧಹಸ್ತರಾಗಿರುವ ಕವಿ ಅವುಗಳ ಜೊತೆಗೆ ವಾಸ್ತವಿಕತೆಯನ್ನು, ಸಹಜ ಸರಳವಾದ ಸಾಲುಗಳಲ್ಲಿ ಸಶಕ್ತವಾಗಿ ಬಂಧಿಸಿದ್ದಾರೆ.
ಜಬೀವುಲ್ಲಾ ಎಮ್. ಅಸದ್ ಬರೆದ ಬುದ್ಧನ ಕುರಿತು ಕವಿತೆಯ ಕುರಿತು ಅನುಸೂಯ ಯತೀಶ್‌ ಬರಹ

Read More

ಮಂಡಲಗಿರಿ ಪ್ರಸನ್ನ ಬರೆದ ಗಜಲ್

“ನನಗೀಗ ಬೇಕಿರುವುದು ಏಕಾಂತ ಎಂದಷ್ಟೇ ಹೇಳಿದೆ
ಆದರೂ ಹಗಲು ರಾತ್ರಿ ನನ್ನೊಳಗೆ ಬೆಂದವು ನೆನಪುಗಳು

ಕಾಲಚಕ್ರದಲಿ ಎಲ್ಲ ಮರೆಯಬಹುದು ಎಂದರು ಯಾರೋ
ಹಳೆ ಆಲದಮರದಂತೆ ಎದೆಯಾಳ ನಿಂದವು ನೆನಪುಗಳು”- ಮಂಡಲಗಿರಿ ಪ್ರಸನ್ನ ಬರೆದ ಗಜಲ್

Read More

ಎಲ್ಲರಂಥವನಲ್ಲ ನನ್ನಪ್ಪ..: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ