Advertisement

Month: January 2025

ಕೊಡೆ…. ಕೊಡೆ … ಎಲ್ನೋಡಿ ಕೊಡೆ: ಸುಮಾವೀಣಾ ಸರಣಿ

ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

Read More

ಸಂಶೋಧನೆ, ಸಾಹಿತ್ಯ ಜಗತ್ತು ಮತ್ತು ನಾನು: ಡಾ| ವಿಶ್ವನಾಥ ಎನ್ ನೇರಳಕಟ್ಟೆ

ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ.
ಡಾ| ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

Read More

ಪ್ರಾರಂಭಿಕ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಮಲ್ಲಾಡಿಹಳ್ಳಿಯ ಇಂಗ್ಲೀಷ್ ಮೀಡಿಯಂಗೆ ಸೀಟು ಸಿಕ್ಕಿದೆ ಎಂಬ ಪೋಸ್ಟ್ ಕಾರ್ಡ್ ಮನೆಗೆ ತಲುಪಿದಾಗ ನಾನು ಸಿಕ್ಕಾ ಪಟ್ಟೆ ಖುಷಿಯಾಗಿದ್ದೆ. ಮುಂದೆ ಬರಬಹುದಾದ ಹಾಸ್ಟೆಲ್ಲಿನ ಕಷ್ಟದ ದಿನಗಳ ಅರಿವು ನನಗಿರಲಿಲ್ಲವಾದ್ದರಿಂದ ನಾನು ಹಾಸ್ಟೆಲ್ ಸೇರೋಕೆ ಉತ್ಸುಕನಾಗಿದ್ದೆ. ಮಲ್ಲಾಡಿಹಳ್ಳೀಗೆ ಅಡ್ಮಿಷನ್‌ಗೆ ಹೋದಾಗ ಅಲ್ಲಿಗೆ ದಾಖಲಾಗಲು ಬಂದ ಅಪ್ಲಿಕೇಷನ್‌ಗಳಲ್ಲಿ ಅತೀ ಹೆಚ್ಚಿನ ಅಂಕಗಳು ನನ್ನವೇ ಇದ್ದುದ್ದರಿಂದ ಅಲ್ಲಿಯ ಮೇಷ್ಟ್ರು ನನ್ನನ್ನು ವಿಚಿತ್ರವಾಗಿ ನೋಡಿದರು. ಕಾರಣವಿಷ್ಟೇ…
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಹರಿಸಲಾರದ ಸಮುದ್ರವಿದೆ ಅವನಲ್ಲೂ..: ಆಶಾ ಜಗದೀಶ್ ಅಂಕಣ

ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಕಾಶ್ಮೀರ ಪ್ರವಾಸದ ನೆನಪುಗಳು…: ರಂಜಾನ್‌ ದರ್ಗಾ ಸರಣಿ

ಸೋನ್‌ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ