ಬದುಕೆಂಬ ಸರಳ ಗಣಿತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಬದುಕೆಂದರೆ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಸುಲಭವಾಗಿ ಸಾಗುವ ಸರಳರೇಖೆಯಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನಲ್ಲಿ ಸಂತಸದ ಕ್ಷಣ ಬರುತ್ತದೆ. ಅತ್ಯಂತ ದುಃಖದ ಗಳಿಗೆಯೂ ಬರುತ್ತದೆ. ಅತ್ಯುತ್ಕರ್ಷದ ಬೆನ್ನಿಗೇ ಮಹಾಪತನವೂ ಸಂಭವಿಸುತ್ತದೆ. ಬದುಕಿನಲ್ಲಿ ಏರಿಳಿತ ಎನ್ನುವುದು ಅತ್ಯಂತ ಸಹಜವಾದ ವಿದ್ಯಮಾನ. ಇಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದು ಪ್ರಾಥಮಿಕ ಶಾಲೆಯಲ್ಲಿ ಕುಳಿತು ಕಲಿತ ಸರಳ ಗಣಿತ.
ಬದುಕಿನ ಲೆಕ್ಕಾಚಾರದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ