ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪ್ರಕಟ
ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪ್ರಕಟ
Read MorePosted by ಕೆಂಡಸಂಪಿಗೆ | Jun 17, 2024 | Home page first slider, spotlight |
ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪ್ರಕಟ
Read MorePosted by ವಸಂತಕುಮಾರ್ ಕಲ್ಯಾಣಿ | Jun 16, 2024 | ವಾರದ ಕಥೆ, ಸಾಹಿತ್ಯ |
ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು..
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ”
Posted by ಅಚಲ ಸೇತು | Jun 15, 2024 | ಸಂಪಿಗೆ ಸ್ಪೆಷಲ್ |
ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.
ಅಚಲ ಸೇತು ಬರಹ ನಿಮ್ಮ ಓದಿಗೆ
Posted by ಡಾ. ವಿನತೆ ಶರ್ಮ | Jun 15, 2024 | ಅಂಕಣ |
ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
Posted by ಎಚ್. ಗೋಪಾಲಕೃಷ್ಣ | Jun 14, 2024 | ದಿನದ ಅಗ್ರ ಬರಹ |
ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ