Advertisement

Month: January 2025

ಮದುವೆ ಮದುವೆ ಆ ಸಿಹಿ ಪದವೆ: ಅಚಲ ಸೇತು ಬರಹ

ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು.
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ

Read More

ಸೊಪ್ಪು-ತರಕಾರಿ ಎನ್ನುವ  ಕಿರುವೈದ್ಯ: ಚಂದ್ರಮತಿ ಸೋಂದಾ ಸರಣಿ

ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಜೊತೆಗಿರುವನು ಚಂದಿರ….: ಮೀನಾ ಮೈಸೂರು ಬರಹ

ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ

Read More

ಎವರೆಸ್ಟ್‌ನಲ್ಲಿ ಹೃದಯ ಬಡಿತ ನಿಂತಾಗ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎರಡು ನಿಮಿಷ ಕಳೆಯಿತು. ನಮ್ಮ ಗಾಡಿ ಚಲಿಸುವ ಲಕ್ಷಣ ಕಾಣಲಿಲ್ಲ. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು. ಏನೋ ತಾಂತ್ರಿಕ ಸಮಸ್ಯೆ ಆಗಿದೆ ಅಂತ ಗೊತ್ತಾಯ್ತು. ಆದರೂ ಇಳಿದು ಹೋಗಲೂ ಆಗಲ್ಲವಲ್ಲ. ನಾವು ಕೂತಾಗಲೇ ಹಿಂದಿನಿಂದ ಇನ್ನೊಂದು ಟ್ರೈನ್ ಬಂದು ಡಿಕ್ಕಿ ಹೊಡೆದುಬಿಟ್ಟರೆ ಏನು ಗತಿ ಎಂಬ ಯೋಚನೆ ಬಂದು ಬೆವರು ಹರಿಯಲು ಶುರು ಆಗಿತ್ತು! ನನ್ನ ಪಕ್ಕದಲ್ಲಿ ಕೂತಿದ್ದ ಒಂದು ಸಣ್ಣ ಹುಡುಗಿ ಆಗಲೇ ಅಳಲು ಶುರು ಮಾಡಿದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ವರ್ಷ ಸಂಧ್ಯಾಕಾಲೇ ಚಹಾ ಸೇವನಂ ಸ್ವರ್ಗಾರೋಹಣ ಸಮಾನಂ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು.
ಚಹಾದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ