Advertisement

Month: January 2025

ನೀ ದೇಹದೊಳಗೋ, ದೇಹ ನಿನ್ನೊಳಗೋ: ರಾಮ್ ಪ್ರಕಾಶ್ ರೈ ಕೆ ಸರಣಿ

ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು ನನಗೆ ಕಾಣಿಸುತ್ತಿದೆ. ಸ್ಥಳೀಯ ಮಟ್ಟದಲ್ಲಿ ರೈತರು ಸಂಘಟಿತರಾದರೆ, ಸ್ಥಳೀಯ ಸಂಪನ್ಮೂಲವನ್ನೇ ಆದಷ್ಟೂ ಬಳಸಬೇಕೆಂಬ ಪ್ರೇರಣೆ ಅವರಲ್ಲಿ ಮೂಡಿತೆಂದರೆ, ಪ್ರಕೃತಿಯ ವಿನಿಮಯ ಪದ್ಧತಿಗಳನ್ನೂ ನಿಯಮಗಳನ್ನು ಗೌರವಿಸಿದಂತಾಗುತ್ತದೆ.
ಮಲ್ಲಿಕಾರ್ಜುನ ಹೊಸಪಾಳ್ಯ ಸಂಪಾದಿಸಿದ ವಿಜಯನಗರ ಜಿಲ್ಲೆಯ ಕೃಷಿ ಕಥನಗಳ “ಹಸಿರು ಮಾತುಕತೆ” ಕೃತಿಗೆ ನಾಗೇಶ ಹೆಗಡೆಯವರು ಬರೆದ ಮಾತುಗಳು

Read More

ಹೌಡಿ ನೇಬರ್ಸ್‌!: ಗುರುಪ್ರಸಾದ ಕುರ್ತಕೋಟಿ ಸರಣಿ

“ನೀವು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೀರಿ. ಇಷ್ಟು ರಾತ್ರಿಯಾಗಿದೆ. ನಿಮ್ಮ ಗಲಾಟೆಯಿಂದ ನನಗೆ ನಿದ್ದೆ ಕೂಡ ಬರುತ್ತಿಲ್ಲ. ನಿಮಗೆ ಅಷ್ಟು ಗೊತ್ತಾಗೋದಿಲ್ಲವೇ..” ಎಂಬ ಅರ್ಥದಲ್ಲಿ ಬೈದ. ನಮಗೆಲ್ಲ ಹಾಗೆ ಮಾಡಿದೆವಲ್ಲ ಎಂಬ ಪಾಪ ಪ್ರಜ್ಞೆ ಬಂತು. ಕ್ಷಮಿಸಿ ಅಂತ ಕೇಳಿದೆವು. ಆದರೆ ಅಲ್ಲಿಯ ನಾಗರಿಕನಾಗಿದ್ದ ಚಂದ್ರುಗೆ ತುಂಬಾ ಮರ್ಯಾದೆ ಹೋಗಿಬಿಟ್ಟಿತು. ಅವನಿಗೆ sorry ಹೇಳುತ್ತಾ, ಇಷ್ಟೆಲ್ಲಾ ಗದ್ದಲ ಹಾಕಬಾರದಿತ್ತು ನೀವು ಎಂಬಂತೆ ನಮ್ಮ ಕಡೆ ನೋಡಿದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತನೆಯ ಬರಹ

Read More

ಮೊಹರಂ ಎಂದರೆ ನಮ್ಮೂರಲ್ಲಿ “ಬಾಬಯ್ಯನ ಹಬ್ಬ”: ಸುಮಾ ಸತೀಶ್ ಬರಹ

ಜಾತಿ ಧರ್ಮಗಳ ಬೇಲಿ ಕಳಚಿ, ಅಪ್ಪಟ ಮನುಷ್ಯತ್ವ ತೋರುವ ಮುಗ್ಧ ಮನಗಳ ನಂಬಿಕೆಯಿದು. ಇದು ಮುಸಲ್ಮಾನರ ಹಬ್ಬ. ಆದರೆ ಇಲ್ಲಿ ಅದನ್ನು ಆಚರಿಸುವವರು ಹಿಂದೂಗಳು. ಇದು ಊರ ಮಂದಿಗೆ ಮನರಂಜನೆಯೂ ಹೌದು ಭಕ್ತಿ ಸಮರ್ಪಣೆಯೂ ಹೌದು. ಎರಡೂ ಮಿಳಿತಗೊಂಡ ವಿಶಿಷ್ಟ ಪದ್ಧತಿಯಿದು. ಊರ ಜನರೆಲ್ಲಾ ಒಂದು ವಾರ ಒಂದೆಡೆ ಸೇರಿ ನಲಿಯಲು ಅವಕಾಶ ಕಲ್ಪಿಸುತ್ತದೆ ಬಾಬಯ್ಯನ ಹಬ್ಬ. ಪರಿಷೆಯ ಪರಿಸರವೊಂದು ಪಸರಿಸುತ್ತದೆ.
ಮೊಹರಂ ಹಬ್ಬದ ಆಚರಣೆಯ ಕುರಿತು ಸುಮಾ ಸತೀಶ್ ಬರಹ

Read More

ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ

ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ