ಸಾಹೇಬರ ಟೇಪಿನೊಳಗೆ ನೀಲಿಯ ಗೋವಿಂದ: ಸುಧಾ ಆಡುಕಳ ಅಂಕಣ
ಬೇರೆ ದಿನಗಳಲ್ಲಿ ಬಾಯಿ ಮುಚ್ಚದಂತೆ ಸೋಬಾನೆ ಪದ ಹೇಳುವ ಗಣಪಿ, ಗೋಯ್ದು ಎಲ್ಲರನ್ನೂ ಎಷ್ಟು ಒತ್ತಾಯಿಸಿದರೂ ಬಾಯಿಬಿಡಲಿಲ್ಲ. “ಅದ ಪೆಟ್ಟಿಗಿ ಮುಂದೆಲ್ಲ ಹೇಳೂಕೆ ಆಗೂದಿಲ್ವೆ. ಹೆದ್ರೀಕಿ ಬರ್ತದೆ. ದೆನಿ ನಡಗಿ ಗಂಟಲು ಕಟ್ಟೋಯ್ತದೆ. ಮತ್ತೆ ಸಾಯೇಬ್ರು ಕೇಳಿದ್ರೆ ಕಿವಿ ಮುಚ್ಕಬೇಕಾಗೂದು.” ಎನ್ನುತ್ತಾ ಹಾಡಲು ನಿರಾಕರಿಸಿದರು. ಸಾಯೇಬರನ್ನು ನಿರಾಸೆಗೊಳಲಿಸಲು ಇಷ್ಟವಿಲ್ಲದ ನೀಲಿಯ ಅಪ್ಪ ಯಾವುದಾದರೂ ಹಾಡನ್ನು ಹೇಳುವಂತೆ ಮಗಳನ್ನು ಪುಸಲಾಯಿಸಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ