Advertisement

Month: January 2025

ಚೆಕಿಯಾ ದೇಶದಲ್ಲಿ…(೧): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಿಲ್ದಾಣದಲ್ಲಿ ಪೋರ್ಟರುಗಳು, ಬಾಡಿಗೆ ಕಾರುಗಳವರು ಹಿಂದೆ ಬೀಳಲಿಲ್ಲ. ಕ್ರಾಂತಿ `ಬೋಲ್ಟ್’ ಕಂಪನಿಯ ಕಾರು ಬುಕ್ ಮಾಡಿದ್ದೇ ಎರಡೇ ನಿಮಿಷಗಳಲ್ಲಿ ಕಾರು ಬಂದು ನಿಂತುಕೊಂಡಿತು. ಗಟ್ಟಿಮುಟ್ಟಾದ ಚೆಕ್ ಯುವಕ ಒಂದು ಸಣ್ಣ ನಗು ಬೀರಿ `ಹಲೋ’ ಎಂದು, ನಮ್ಮ ಲಗೇಜ್‌ಗಳನ್ನು ಡಿಕ್ಕಿಯಲ್ಲಿಟ್ಟು ನಾಲ್ವರು ಕುಳಿತುಕೊಂಡೆವು.
ಚೆಕಿಯಾ ದೇಶದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೊದಲ ಭಾಗ ಇಲ್ಲಿದೆ

Read More

ದಾರಿ ಯಾವುದಯ್ಯಾ….?: ಸುಧಾ ಆಡುಕಳ ಅಂಕಣ

“ನಿಮ್ಮ ದೇವರ ಜಮೀನು ಕೇಳ್ತೇನೆ ಅಂತ ತಪ್ಪು ತಿಳಿಯಬೇಡಿ. ಒಂದು ಮನೆಗಾಗುವಷ್ಟು, ಜತೆಗೆ ರಸ್ತೆಗೊಂದು ದಾರಿಯಾಗುವಷ್ಟು ಜಾಗ ಬಿಟ್ಟುಕೊಟ್ಟರೆ ನಾವು ಮುಂದಿನ ಮಳೆಗಾಲದಲ್ಲಿ ಬದುಕ್ತೀವಿ. ಇಲ್ಲಾಂದ್ರೆ ಎಲ್ಲೋ ದೂರದಲ್ಲಿ ಮನೆಕಟ್ಟಿ ಈ ಜಮೀನಿಗೆ ಓಡಿಯಾಡೋದೆಲ್ಲ ಆಗಿಹೋಗುವ ಮಾತಲ್ಲ. ನೋಡಿ, ಒಂದು ಮನಸು ಮಾಡಿ. ಮತ್ತೆ ನಂಗೆ ನೀವು ಧರ್ಮಕ್ಕೆ ಕೊಡೂದೇನೂ ಬ್ಯಾಡ…..
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ಎಗ್‌ ರೈಸ್‌ ತಿಂತೀರಿ ಸರ್ರ…?: ಗುರುಪ್ರಸಾದ ಕುರ್ತಕೋಟಿ ಕೃತಿಯ ಬರಹ

ಬಹುಶಃ ನಾನೂ ಯುವಕನಾಗಿದ್ದಾಗ ಅವನಂತೆಯೇ ಯೋಚಿದ್ದೆನೆ? ಇಲ್ಲವಲ್ಲ! ಎಲ್ಲರೂ ನಮ್ಮ ಹಾಗೆಯೇ ಯೋಚಿಸಬೇಕು ಅಂತಿಲ್ಲವಲ್ಲ! ನಾವೇನಾದರೂ ಪಟ್ಟಣದಲ್ಲಿ ಸುಖ ಇಲ್ಲ ಮಾರಾಯ ಅಂತ ಹೇಳಿದರೆ ಅಲ್ಲಿನವರು “ನಿಮ್ಮ ಹತ್ರ ರೊಕ್ಕ ಜಾಸ್ತಿ ಆಗಿ ಕೊಳಿತೈತಿ ಬಿಡ್ರಿ. ಅದಕ್ಕ ಹಿಂಗ ಮಾತಾಡತೀರಿ” ಅಂತ ಗೊಳ್ಳ ಅಂತ ನಗುತ್ತಾರೆ!
ಕೆಂಡಸಂಪಿಗೆಯಲ್ಲಿ ಪ್ರಕಟವಾದ ಗುರುಪ್ರಸಾದ ಕುರ್ತಕೋಟಿಯವರ ಅಂಕಣ ಬರಹ “ಗ್ರಾಮ ಡ್ರಾಮಾಯಣ” ಇದೀಗ ಪುಸ್ತಕ ರೂಪದಲ್ಲಿ ಅಚ್ಚಾಗುತ್ತಿದ್ದು, ಆಗಸ್ಟ್‌ ಕೊನೆಗೆ ಓದುಗರ ಕೈ ಸೇರಲಿದೆ. ಅದರ ಒಂದು ಬರಹ ನಿಮ್ಮ ಓದಿಗೆ

Read More

ಗಡಗಡ ನಡುಗಿಸಿದ ಪಾವಗಡದ ತೋಳ: ಸುಮಾ ಸತೀಶ್ ಸರಣಿ

ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು.‌ ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ‍ದೆವ್ವ ಅಲ್ಲ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ‌ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ

Read More

ಕೂರಾಪುರಾಣ ೪: ಸೂಜಿಗಳೆಂದರೆ ಸಂಕಷ್ಟವೇ…

ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ