Advertisement

Month: January 2025

ಕನ್ನಡಿಗೆ ಗೊತ್ತಿಲ್ಲ. ಕಡಲಿಗೆ ಗೊತ್ತು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಭಾವೈಕ್ಯ ನಿಧಿ ಜಯದೇವ ಜಗದ್ಗುರುಗಳ ಘನ ವ್ಯಕ್ತಿತ್ವ: ರಂಜಾನ್ ದರ್ಗಾ ಬರಹ

ಶಿಕ್ಷಣದ ಮೂಲಕವೇ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುದು ಅವರ ದೃಢನಿರ್ಧಾರವಾಗಿತ್ತು. ಸಂಚಾರ ಕಾಲದಲ್ಲಿ ಭಕ್ತರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ವಿದ್ಯಾಪ್ರಸಾರಕ್ಕೆ ವಿನಿಯೋಗಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು. ಈ ಶಿಕ್ಷಣದ ಸೌಲಭ್ಯವನ್ನು ಬೇರೆ ಧರ್ಮಗಳ ಬಡವರಿಗೂ ದೊರೆಯುವಂತೆ ನೋಡಿಕೊಂಡರು.
ಜಯದೇವ ಜಗದ್ಗುರುಗಳ ೬೮ನೇ ವರ್ಷದ ಸ್ಮರಣೋತ್ಸವದ (ಅಕ್ಟೋಬರ್‌ ೨) ಸಂದರ್ಭದಲ್ಲಿ ಅವರ ಕುರಿತು ರಂಜಾನ್‌ ದರ್ಗಾ ಬರಹ ನಿಮ್ಮ ಓದಿಗೆ

Read More

ಕೀರು ಟೇಸ್ಟ್: ಸುಮಾವೀಣಾ ಸರಣಿ

ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ

Read More

ಗೌತಮ ಜ್ಯೋತ್ಸ್ನಾ ಬರೆದ ಈ ಭಾನುವಾರದ ಕತೆ

ವತ್ಸನ ಹೊಟ್ಟೆಯೊಳಗೆ ಏನೋ ಚುಚ್ಚಿದ ಹಾಗೆ ನೋವು, ಇಡೀ ಶರೀರ ಬಿಗಿಯಾಗುತ್ತಿದ್ದ ಭಾವ. ಆ ಬಾರಿನ ದೀಪದ ಬುರುಡೆಗಳು ಈಗ ದಟ್ಟ ಹಳದಿ ಪ್ರಭೆಯಲ್ಲಿ ಧಗಧಗಿಸುತ್ತಿದ್ದವು, ಯಾವುದೋ ಅನ್ಯ ಗ್ರಹದಲ್ಲಿ ಗ್ರಹಣವಾದಾಗ ಮಬ್ಬಾಗಿ ಬೆಳಕಾದಂತೆ.
ಗೌತಮ ಜ್ಯೋತ್ಸ್ನಾ ಹೊಸ ಕಥಾ ಸಂಕಲನ “ಜಕ್ಕಿಣಿ” ಬಿಡುಗಡೆಯಾಗುತ್ತಿದ್ದು, ಈ ಸಂಕಲನದ ಒಂದು ಕತೆ “ಮಾರೀಚ
ಅಥವಾ ಒಂದು ಅಪಾಯಕಾರಿ ಮನಸ್ಸಿನ ಪ್ರಣಯ ಪ್ರಸಂಗ” ನಿಮ್ಮ ಓದಿಗೆ

Read More

ಭಾವನೆಗಳಿಗೆ ಬೆಲೆ ಕಡಿಮೆಯಾಗುತ್ತಿರುವ ಹೊತ್ತು…: ಕಾರ್ತಿಕ್ ಕೃಷ್ಣ ಬರಹ

ಇಂತಹದೇ ಆಯ್ಕೆ ವಾಟ್ಸ್ಯಾಪ್‌ಗೆ ಬರಲು ಬಹಳ ಸಮಯವೇನೂ ಬೇಕಾಗಿಲ್ಲ ಎಂದು ಕಳೆದ ವಾರವಷ್ಟೇ ಮನೆಯಲ್ಲಿ ಚರ್ಚೆ ನಡೆದಿತ್ತು. ಅರೇ.. ಇಷ್ಟು ಬೇಗ ಆ ಆಯ್ಕೆ ಬಂದೇ ಬಿಟ್ಟಿತಲ್ಲ ಅಂದುಕೊಂಡು ರಿಪ್ಲೈ ಮಾಡುವ ಬದಲು ಲೈಕ್ ಒತ್ತಿ ‘ಆಲ್ರೈಟ್… ಮುಂದಕ್ಕೆ ಹೋಗೋಣ’ ಎಂದು ಮತ್ತೊಂದು ಸ್ಟೇಟಸ್ ನೋಡತೊಡಗಿದೆ. ನನ್ನದೊಂದು ರಿಪ್ಲೈನಿಂದ ಶುರುವಾಗಬಹುದಾಗಿದ್ದ ಸಂಭವನೀಯ ಸಂಭಾಷಣೆಯೊಂದು ಚಿಗುರೊಡೆಯುವ ಮುನ್ನವೇ ಕನಲಿ ನರಳಿದ್ದು ನನಗೆ ಆ ಕ್ಷಣ ಗೊತ್ತಾಗಲಿಲ್ಲ!
ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ