Advertisement

Month: January 2025

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಿ.ಎಸ್.ರಾಮಸ್ವಾಮಿ ಕತೆ

ಬ್ಯಾಂಕಿನಿಂದ ಫೋನು ಬಂತು. ಐವತ್ತು ಲಕ್ಷದ ಓಡಿ ಆಗಿದೆ ಅಂತ ಮ್ಯಾನೇಜರು ಹೇಳಿದರು. ಹಾಗಾದರೆ ಎಲ್ಲೋ ಎಡವಟ್ಟಾಗಿದೆ ಅಂತ ಮನಸ್ಸು ಹೇಳಿತು. ಯಾವತ್ತೂ ಮಕ್ಕಳನ್ನು ಅನುಮಾನಿಸದವನು ನನ್ನ ಬ್ಯಾಂಕ್ ಪಾಸ್ ಪುಸ್ತಕ, ಡಿಪಾಸಿಟ್ ಪತ್ರಗಳು, ಅಂಚೆ ಕಛೇರಿ ಎಮ್.ಐ.ಎಸ್‌ಗಳು ಇರುವುದನ್ನು ಖಾತರಿ ಮಾಡಿಕೊಂಡೆ. ಮಗಳು ಸುಧಾ ಹೆಸರಲ್ಲಿ ನಾಮಿನೇಶನ್ ಮಾಡಿದ್ದ ಬ್ಯಾಂಕ್ ಸರ್ಟಿಫಿಕೇಟ್ ವಿತ್‌ಡ್ರಾ ಆಗಿರುವುದೂ, ಸುಧಾಕರನ ಹೆಸರಲ್ಲಿ ಇಟ್ಟಿದ್ದ ಎಫ್.ಡಿಗಳು ಮಾಯವಾಗಿರುವುದೂ ಗೊತ್ತಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಿ.ಎಸ್.ರಾಮಸ್ವಾಮಿ ಬರೆದ ಕತೆ “ಜೂಜಿಗೆ ಕೂತವರ ಜುಜುಬಿ ಆಸೆಗಳು….” ನಿಮ್ಮ ಓದಿಗೆ

Read More

ಕೈ ಹಿಡಿದು ನೀ ನಡೆಸು ಮುಂದೆ…: ಕಾರ್ತಿಕ್ ಕೃಷ್ಣ ಸರಣಿ

ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಗಣೇಶ ತರುವ ಸುಖ, ಸಂತೋಷ…: ವಿನತೆ ಶರ್ಮಾ ಅಂಕಣ

ಈ ಪ್ರಪಂಚದ ಒಂದಷ್ಟು ದೇಶಗಳನ್ನು ಸುತ್ತುವಾಗ ಗಣೇಶನ ಖ್ಯಾತಿ ಅಚ್ಚರಿ ತಂದಿತ್ತು. ಯೂರೋಪ್, ಯುನೈಟೆಡ್ ಕಿಂಗ್ಡಮ್ ಅಲ್ಲಂತೂ ಗಣೇಶನ ಪರಿಚಯ ಸುಮಾರು ಜನರಿಗಿದೆ. ಅಂದಚೆಂದಕ್ಕೆಂದು ಅವನ ಮೂರ್ತಿಗಳನ್ನು ಇಟ್ಟಿರುವುದು ದಿಟ. ನಮ್ಮ ಆಸ್ಟ್ರೇಲಿಯದಲ್ಲೇಕೋ ಗಣಪನ ಹೆಸರು ಜನರಿಗೆ ಅಷ್ಟೊಂದು ಗೊತ್ತಿಲ್ಲ. ‘ಯು.ಕೆ. ಮತ್ತು ಅಮೇರಿಕಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಪ್ಪತ್ತು ವರ್ಷಗಳಷ್ಟು ಹಿಂದಿದೆ’ ಎನ್ನುವ ಜಾಣ್ಣುಡಿ ನಿಜವೇನೂ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ” ಆರಂಭ

ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ?
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ”

Read More

ಭಾವಯಾಮಿ ಗೌರೀ..: ದೀಪಾ ಫಡ್ಕೆ ಬರಹ

ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ.
ಜಗದೆಲ್ಲ ಗೌರಿಯರ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ