ಇಸ್ಕೂಲ್ ಅನ್ನೋ ವಿಸ್ಮಯಲೋಕ: ಸುಮಾ ಸತೀಶ್ ಸರಣಿ
ಶಾಲೆ ಹಿಂಭಾಗದಲ್ಲಿ ಆಟದ ಮೈದಾನವಿತ್ತು. ಸಂಜೆ ಶಾಲೆ ಬಿಟ್ಟ ಮೇಲೆ ಮನೇಲಿ ಚೀಲ ಇಟ್ಟು, ಒಂದಿಬ್ಬರು ಗೆಳತೀರ ಜೊತೆ ಮತ್ತೆ ಇಸ್ಕೂಲಿಗೆ ಬಂದು ಹಳದಿ ಪಟುಕದ ಮೊಗ್ಗು ಕೀಳೋದು. ನಮ್ ತೋಟ್ದಲ್ಲಿ ತರಹೇವಾರಿ ಹೂವಿನ ಗಿಡವಿದ್ರೂ ಇದ್ರ ಮೇಲೇ ಕಣ್ಣು. ಪೈಪೋಟಿ ಮೇಲೆ ಮೊಗ್ಗು ಕೊಯ್ಯೋದು. ಗಿಡದ ತುಂಬಾ ಮುಳ್ಳುಗಳು. ಕೈ ಎಲ್ಲ ತರಚಿ ಹೋಗ್ತಿತ್ತು. ಅದರ ನೆದರೇ ಇರ್ತಿರಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಶಾಲಾದಿನಗಳ ಕುರಿತ ಬರಹ