Advertisement

Month: January 2025

ಇಷ್ಟೊಂದ್‌ ಜನಾ.. ಎಲ್ಲಿಂದ ಬಂದೋರು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಎರಡನೇ ಭಾಗ

Read More

ಚಿಕ್ಕ್ಮಾಲೂರಿನ ದೊಡ್ಮನೆ: ಸುಮಾ ಸತೀಶ್ ಸರಣಿ

ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ

Read More

ಎದೆ ನಡುಗಿಸಿ ಮೈ ನವಿರೇಳಿಸುವ ಆ ಚಿತ್ರ….: ಗೊರೂರು ಶಿವೇಶ್‌ ಬರಹ

ಮಾರ್ಕ್ವೆಜ್‌ನ ಅದ್ಭುತರಮ್ಯ ಕಾದಂಬರಿ ಒಂದು ನೂರು ವರ್ಷಗಳ ಏಕಾಂತ ಕೃತಿಯನ್ನು ಓದಿದವರಿಗೆ ಆ ರೀತಿಯ ಅದ್ಭುತರಮ್ಯ ಪರಿಚಯವನ್ನು ಈ ಸಿನಿಮಾ ಮೂಡಿಸುತ್ತದೆ. ಸದಾ ಮಳೆ ಹಿಡಿದ ಊರು, ಪಾತಾಳಲೋಕದ ಅನುಭವ ನೀಡುವ ಬಾವಿಯಲ್ಲಿನ ಚಿತ್ರಣ ಚಿತ್ರಕ್ಕೆ ಒಂದು ನಿಗೂಢತೆಯನ್ನು ಒದಗಿಸಿ ಭಯ ಮತ್ತು ಕುತೂಹಲದಿಂದ ನಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
ಹಿಂದಿಯ “ತುಂಬಾಡ್”‌ ಸಿನಿಮಾದ ಕುರಿತು ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

Read More

ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ…
ಮೆಟ್ಟಿಲುಗಳ ಬಳಕೆಯ ಕುರಿತು ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

Read More

ಸಹಪಾಠಿಗಳ ಸಾಧನೆ ಹಾಗೂ ಕೊಂಡಜ್ಜಿ ಕ್ಯಾಂಪ್: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ