Advertisement

Month: January 2025

“ಧಂ”ಪತಿ ಮುಯ್ಯಿ: ಸುಮಾವೀಣಾ ಸರಣಿ

‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ

Read More

ಹೊಸ ಚಿಂತನೆ..ಹೊಸ ತಿರುವು..: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್‌ಲ್ಯಾಂಡಿಕ್‌ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಐಸ್‌ಲ್ಯಾಂಡ್‌ ದೇಶದ ಖ್ಯಾತ ಕವಿ ಮಾಗ್ನುಸ್ ಸಿಗುರ್ದ್ಸನ್-ರವರ
(Magnus Sigurðsson) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಯಾವಾಗ ಶಾಂತಮ್ಮ ಮೃದುಲಾಳ ಆರೈಕೆಯಲ್ಲಿ ನಾಲ್ಕು ದಿನ ಕಳೆದರೋ, ಮೃದುಲಾಳ ಮಂದಸ್ಮಿತ ಮುಖ, ಸ್ವಲ್ಪವೂ ಬೇಸರಿಸದೆ ಗಂಡನನ್ನು ಅನುಸರಿಸಿಕೊಂಡು ಹೋಗುವ ಪರಿ, ತಾನು ಗರ್ಭಿಣಿಯಾಗಿದ್ದರೂ ತನ್ನ ಕೆಲಸ ಬೊಗಸೆ ಕಡಿಮೆ ಮಾಡಿಕೊಳ್ಳದೆ ಪಾದರಸದಂತೆ ಓಡಾಡುವ ರೀತಿ, ಇವನ್ನೆಲ್ಲಾ ನೋಡುವಾಗ ತಮ್ಮ ಬಗ್ಗೆಯೇ ನಾಚಿಕೆಯಾಯಿತು ಶಾಂತಮ್ಮನವರಿಗೆ.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ರೂಪಾಂತರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಇಲ್ಲಿ ಸೋಲೂ ಇದೆ, ಗೆಲುವೂ ಇದೆ…: ಕಾರ್ತಿಕ್ ಕೃಷ್ಣ ಸರಣಿ

ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಮೈನಾ- ಇದು ದೇಹವಲ್ಲ, ಭಾವಗಳ ಸಂಕಲನ: ರಾಮ್ ಪ್ರಕಾಶ್ ರೈ ಕೆ. ಸರಣಿ

ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ