Advertisement

Month: January 2025

ಸ್ಮಾರ್ಟ್ ಬೋರ್ಡ್..!: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸ್ಮಾರ್ಟ್‌ ಬೋರ್ಡ್‌ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್‌ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್‌, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ

Read More

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ.
ಇಂದು ಕೆ.ವಿ. ತಿರುಮಲೇಶರ ಹುಟ್ಟುಹಬ್ಬ. ಕಳೆದ ವರ್ಷ ತೀರಿಹೋದ ಅವರ ನೆನಪಿಗೆ ಅವರ ‘ಅವಧ’ ಕವನ ಸಂಕಲನದ ಕುರಿತ ಸುಮಾವೀಣಾ ಬರಹ ಇಲ್ಲಿದೆ

Read More

ಅಮೆರಿಕದ ಅಂಗಡಿಯಲ್ಲಿ ಗಣೇಶ ದರ್ಶನ!: ಗುರುಪ್ರಸಾದ ಕುರ್ತಕೋಟಿ ಸರಣಿ

ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ನಾವೋ…
ಮಹಾತಾಯ ಗರ್ಭದಲ್ಲಿ
ಎಂದೋ ಉದುರಿ ಬಿದ್ದು
ಅವಳ ನಿರ್ಲಕ್ಷ್ಯಕ್ಕೆ ಒಳಪಟ್ಟ
ಅಸ್ಪೃಶ್ಯ ಮಕ್ಕಳು
ಮುಟ್ಟಲಾರೆವು
ಅವಳ ಮೊಲೆ ಹಾಲನ್ನು
ಎಲ್ಲರಂತೆ ಆಡಲಾಗದ
ಎಲ್ಲರಂತೆ ಕುಣಿಯಲಾಗದ
ಧರೆಯ ಹೆಳವರು
ಭೂತ ವರ್ತಮಾನದ ಹಾದಿ
ಅನಾದಿಗಳನ್ನು ಕಾಣದೆ
ಭವಿಷ್ಯದ ಹೆಜ್ಜೆ ಗುರುತುಗಳನ್ನು
ಮೂಡಿಸಲು
ಅಜ್ಜ ಬಿಟ್ಟು ಹೋದ
ಊರುಗೋಲನ್ನೇ ನಂಬಿ
ಕುಂತಲ್ಲೇ ಕೂತಿದ್ದೇವೆ…!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More

ಸುತ್ತೂರ್ಗೊಂದೇ ಗೌರ್ಮೆಂಟು ಇಸ್ಕೂಲ್: ಸುಮಾ ಸತೀಶ್ ಸರಣಿ

ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ