Advertisement

Month: January 2025

ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

“ಬಾನಿಗೆ ತೂಗುಬಿಟ್ಟ ತೂಗುದೀಪದ
ಸೊಡರು ತುಯ್ಯುತ್ತಲಿರುವಾಗ
ಒಂದು ಜೀವಂತ ಗ್ರಹ ಮಂಡಲನ್ನು
ಬಯಸುತ್ತಿದೆ ಪ್ರತಿ ನಕ್ಷತ್ರವೂ
ಎಷ್ಟೇ ವೇಗವಿರಲಿ ಎಷ್ಟೇ ದೈತ್ಯನಿರಲಿ
ಒಂದು ಉಸಿರಿನ ಚಲನೆಯಿಲ್ಲದೆ
ಜೀವಂತವಾಗುವುದಾರೂ ಹೇಗೆ
ನಿನ್ನ ಒಂದು ಸ್ಪರ್ಶವಾದರೂ
ತಂಗಾಳಿಯ ಹೊಟ್ಟೆ ಹೊಕ್ಕು
ಮೈತಾಗದಿದ್ದರೆ…”-ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

Read More

ಜೀವಕ್ಕಿಂತ ದೊಡ್ದು ಯಾವ್ದು?: ಸುಧಾ ಆಡುಕಳ ಅಂಕಣ

ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ

Read More

ಊರ ಅಭಿವೃದ್ಧಿಯಲ್ಲಿ ಅಪ್ಪನ ಶ್ರಮ…: ಸುಮಾ ಸತೀಶ್ ಸರಣಿ

ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್‌ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ

Read More

ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….

ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ”‌ ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್‌ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್‌ ನಡೆಸಿದ ಸಂದರ್ಶನ ನಿಮ್ಮ ಓದಿಗೆ…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ