Advertisement

Month: January 2025

ಸ್ವಾಭಿಮಾನದ ಸಂಕೇತ “ವಿ. ಶ್ರೀನಿವಾಸಪ್ರಸಾದ”: ರಂಜಾನ್ ದರ್ಗಾ ಸರಣಿ

12ನೆಯ ಶತಮಾನದ ಬಸವಾದಿ ಶರಣರು ಈ ಹಿಂಸಾಯಂತ್ರಕ್ಕೆ ನೇರವಾದ ಸವಾಲೆಸೆದರು. ಕಾಯಕ ಸಿದ್ಧಾಂತದ ಮೂಲಕ ಇದರ ಮರ್ಮವನ್ನು ಹೊರಗೆಳೆದರು. ಈ ಹಿಂಸಾಯಂತ್ರದ ಬಿಡಿ ಉಪಕರಣಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ ಮತ್ತು ಲಿಂಗಭೇದದ ವಿರುದ್ಧ ಶರಣರು ಹೋರಾಡಿದರು. ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿಕೊಂಡು ತಮ್ಮ ಸವರ್ಣೀಯ ಚಾಲಕರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತ ಅದನ್ನು ಕಾಪಾಡುವುದಲ್ಲೇ ಹಿಂಸಾಯಂತ್ರ ತಲ್ಲೀನವಾಗಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಬಟ್ಟೆ ಅಂಗಡಿಯಲ್ಲಿದ್ದ ಸುಮುಖ ಪ್ಯಾಂಟೊಂದರ ಕಡೆಗೆ ಕೈ ತೋರಿಸಿದ್ದ. ಬಟ್ಟೆ ತೋರಿಸುತ್ತಿದ್ದ ಯುವತಿ ಇವನು ಕೈತೋರಿಸಿದೆಡೆಗೆ ನೋಡಿದಳು. ಆರು ಜೇಬುಗಳು, ಸುತ್ತಮುತ್ತೆಲ್ಲಾ ಉದ್ದುದ್ದ ಬಳ್ಳಿ ಬೆಳೆದಂತಿದ್ದ ಗಿಲಿಗಿಲಿ ಪ್ಯಾಂಟೊಂದು ಅಲ್ಲಿತ್ತು. ಅದು ಸುಮುಖ ಯಾವಾಗಲೂ ಹೋಗುತ್ತಿದ್ದ ಬಟ್ಟೆ ಅಂಗಡಿ. ಅದರ ಮಾಲೀಕರಿಂದ ಹಿಡಿದು ಎಲ್ಲರನ್ನೂ ಪರಿಚಯವಿತ್ತು ಸುಮುಖನಿಗೆ. ಈಗ ಬಟ್ಟೆ ತೋರಿಸುತ್ತಿದ್ದ ಯುವತಿಯೂ ಸಹ ಇವನ ಪರಿಚಯದವಳೇ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಕತೆ “ಸುಮುಖ ಮತ್ತು ಗಾಂಧಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ ಪತ್ರವಿದೆಯಲ್ಲ ಅದು ಒಬ್ಬ ಆದರ್ಶ ತಂದೆ ತನ್ನ ಮಗಳ ಕುರಿತ ಅಪರಿಮಿತ ಅಪ್ಯಾಯತೆ ಮತ್ತು ಕಾಳಜಿಯಿಂದ ಮಾಡಿದ ಕೆಲಸವೆಂದೇ ನನ್ನ ದೃಢಭಾವನೆ. ಈ ಪತ್ರಗಳು ಒಮ್ಮೊಮ್ಮೆ ಖಂಡಕಾವ್ಯದಂತೆಯೂ ಭಾಸವಾಗಿದ್ದು ನನಗೆ ಆಶ್ಚರ್ಯ ಹುಟ್ಟಿಸಿದೆ.
ಎಂಕೆ ಗಾಂಧಿ ರಚಿತ “ಪ್ರಿಯ ಮೀರಾ” ಬಾಪು ಮಗಳಿಗೆ ಬರೆದ ಪ್ರೇಮ ಪತ್ರಗಳನ್ನು ಮಂಜುನಾಥ್‌ ಚಾಂದ್‌ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ದೀಪಾ ಗೋನಾಳ ಬರಹ

Read More

ಅನಿವಾಸಿಗಳಿಗೆ “ಇಳೆಯ” ಸಂಗೀತದ ಹಿತ: ಡಾ. ವಿನತೆ ಶರ್ಮಾ ಅಂಕಣ

ಬ್ಯಾಂಡ್ ಹೊಂದಿರುವ ಸಂಗೀತ ವಾದ್ಯಗಳ ವೈವಿಧ್ಯತೆ, ತಬಲಾ ಬಾರಿಸುವ ನಿಪುಣತೆ, ಕೊಳಲು ಊದುವ ಮಾಧುರ್ಯ, ವಯಲಿನ್ ನುಡಿಸುವ ತನ್ಮಯತೆ, ಕೀಬೋರ್ಡ್ ಮೇಲೆ ನಲಿದಾಡುವ ಬೆರಳುಗಳ ಚಾಕಚಕ್ಯತೆ, ಎಲ್ಲವೂ ಚೊಕ್ಕವಾಗಿ ಚೆಂದೆನಿಸಿತ್ತು. ನಾನು ಇದೆ ಮೊದಲ ಬಾರಿ ಎಲೆಕ್ಟ್ರಿಕ್ ತಬಲಾ ನೋಡಿದ್ದು, ಬೆರಗಾಗಿದ್ದು. ಅದನ್ನು ಬಾರಿಸುತ್ತಿದ್ದ ಯುವಕ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದ ಕೂಡ. ಅವಲ್ಲದೆ, ಇನ್ನಿಬ್ಬರು ಎರಡು ಶಾಸ್ತ್ರೀಯ ತಬಲಾಗಳನ್ನೂ ಬಾರಿಸುತ್ತಿದ್ದರು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಶಿಕ್ಷಣದ ರೀತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಗುವಿನ ಸಾಮರ್ಥ್ಯ, ಒಲವು, ಮನೋಧರ್ಮಗಳನ್ನು ತಿಳಿಯುವ ಭಾಷೆ, ಗಣಿತಕ್ಕೆ ನಂತರದ ಸ್ಥಾನ, ಮೊದಲು ಮಗು ಭಾವನಾತ್ಮಕವಾಗಿ ಹೇಗಿದೆಯೆಂದು ತಿಳಿದು, ಅಂದಾಜು ಮಾಡಿ ಪೋಷಕರಿಗೆ ತಿಳಿಸುತ್ತಾರೆ. ತನ್ನ ವಯಸ್ಸಿನವರೊಡನೆ ಹೇಗೆ ಸಂವಹನ ಮಾಡುತ್ತದೆ, ಒಂದು ತಂಡದ ಸದಸ್ಯನಾಗಿ ಹೇಗೆ ಕೆಲಸ ಮಾಡುತ್ತದೆ, ನೆರವು ನೀಡಬಲ್ಲದೆ, ನೆರವು ಪಡೆಯಬಲ್ಲದೆ, ಇತರರ ಸಾಮರ್ಥ್ಯವನ್ನು ಗೌರವಿಸಬಲ್ಲದೆ, ತನ್ನ ನಿಲುವನ್ನು ಇತರರ ಮೇಲೆ ಹೇರದೆ ತರ್ಕಬದ್ಧವಾಗಿ ವಿವರಿಸಬಲ್ಲದೆ, ತಪ್ಪನ್ನು ತಿದ್ದಿಕೊಳ್ಳಬಲ್ಲದೆ, ನಿರಾಶೆ, ವೈಫಲ್ಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಅನ್ಯ ಸಂಸ್ಕೃತಿ, ಹಿನ್ನೆಲೆಯಿಂದ ಬಂದ ಮಕ್ಕಳನ್ನು ಹೇಗೆ ಕಾಣುತ್ತದೆ…
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ