ಕನ್ನಡ ಭಾಷೆಗೆ ಗೆಜ್ಜೆಯ ದಾರಿ… ಭಾವನೃತ್ಯದ ಸುಂದರ ಪರಿ: ಎಲ್.ಜಿ.ಮೀರಾ ಅಂಕಣ
ಭಾವಗೀತೆಯು ಕನ್ನಡ ನವೋದಯ ಸಾಹಿತ್ಯದ(1870-1940) ಸಂದರ್ಭದಲ್ಲಿ ಹುಟ್ಟಿತಲ್ಲವೇ. ಆ ಕಲಾಪ್ರಕಾರವು ಅನೇಕ ಕವಿಗಳ ಸಾಹಿತ್ಯವನ್ನು ಗೀತೆಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯಕ್ಷೇತ್ರದ ಆಚೆಗಿನ ದೊಡ್ಡ, ಅದರಲ್ಲೂ ಅನಕ್ಷರಸ್ಥ ಜನಸಮುದಾಯಕ್ಕೂ ತಲುಪಿಸುವ ಕೆಲಸ ಮಾಡಿತು. ನಮ್ಮ ಸಂಸ್ಕೃತಿಯು ಸಾಹಿತ್ಯಪ್ರಸರಣದಲ್ಲಿ ಭಾವಗೀತೆಯನ್ನು ದುಡಿಸಿಕೊಂಡಂತೆ ಭಾವನೃತ್ಯವನ್ನು ಸಹ ದುಡಿಸಿಕೊಳ್ಳಬಹುದು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ