Advertisement

Month: January 2025

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕತೆ

ಅಲ್ಲಿಂದ ತಿರುಗಿ ಬರುವಾಗ, ಭೆಟ್ಟಿಯಾದವರೆಲ್ಲ ಮಾತಾಡಿಸಿದರು. ಮಾವನ ಭಕ್ತರು ಇವರೆಲ್ಲ. ಮಾವ ಈ ಊರಿನ ಕುಲದೇವತೆಗಳಲ್ಲಿ ಒಬ್ಬ. ಊರ ಜನರೆಲ್ಲ ಒಂದು ರೀತಿಯಿಂದ ಅವನಿಗೆ ಋಣಿ. ಮದುವೆ-ಮುಂಜಿವೆ, ಸಾವು-ಹುಟ್ಟು, ದಾನ-ದಕ್ಷಿಣೆ, ಜಾತ್ರೆ, ಕುಸ್ತೀ ಕಣ, ಚುನಾವಣೆ, ಅಧಿಕಾರಿಗಳಿಗೆ ಕೋಳೀ ಪಾರ್ಟಿ ಎಲ್ಲವೂ ಮಾವ-ದತ್ತವೇ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕತೆ “ಮಾವ” ನಿಮ್ಮ ಈ ಭಾನುವಾರದ ಓದಿಗೆ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಯಾವ ಯುಗಭಿತ್ತಿಯಲಿ ಮೂಡಿತೀ ತೇಜ
ಧರ್ಮನೇಗಿಲು ಉತ್ತ ಭೌಮಬೀಜ
ಮೊಳೆತು ಹೆಮ್ಮರವಾಗಿ, ಭಕ್ತಿಬಾಂದಳದಲ್ಲಿ ಬಿತ್ತರಿಸಿತೋ
ಭಾವಸೋಜಿಗವಾಗಿ, ಅಂಕುರದ ಒಳಗಣ್ಣು
ಚಿತ್ತದಾಕಾಶವನೆ ಎತ್ತರಿಸಿತೋ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ ಸೂಕ್ಷ್ಮಗಳನ್ನು ಗಮನಿಸ ಬಹುದು. ಅಜಿತ್ ಅವರ ಕಥನದ ಹಿರಿಮೆಯೆಂದರೆ ಅವರಿಗೆ ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆ. ಕಥನದ ಹಲವು ನೆಲೆಗಳನ್ನು ಅವರು ಮುಕ್ತವಾಗಿರಿಸಿ ಅವು ಓದುಗರ ಮನೋಭೂಮಿಕೆಯಲ್ಲಿ ಬೆಳೆಯಲು ಬಿಡುತ್ತಾರೆ. ‘ತುಂಬೀತೆ ಒಲವು’ ಈ ನೆಲೆಯಲ್ಲಿ ಬಹು ಯಶಸ್ವಿಯಾದ ಕಥೆ.
ಡಾ. ಅಜಿತ್‌ ಹರೀಶಿ ಹೊಸ ಕಥಾ ಸಂಕಲನ “ಉಪರಿ”ಯ ಕುರಿತು ಎನ್.ಎಸ್.ಶ್ರೀಧರ ಮೂರ್ತಿ ಬರಹ

Read More

ಇಂಗ್ಲಿಷ್ ಮತ್ತು ನೆದರ್‌ಲ್ಯಾಂಡ್ಸ್: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನೆದರ್‌ಲ್ಯಾಂಡ್ಸ್ ಯುರೋಪಿನ ಭಾಗ. ಇಂಗ್ಲೆಂಡಿಗೆ ಹತ್ತಿರ. ರೈಲಿನಲ್ಲಿ ಕೂಡ ಕೇವಲ ನಾಲ್ಕು ಘಂಟೆಗಳ ಪ್ರಯಾಣ. ಯುರೋಪಿನಲ್ಲಿ ಬಹು ಭಾಷಾ ಸಂಸ್ಕೃತಿ ಇದೆ. ಬಹುಪಾಲು ಯುರೋಪಿಯನ್ನರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸುತ್ತಾರೆ, ಅಥವಾ ಬಳಸಲು ಬಲ್ಲರು. ಆದರೂ ಕೆಲ ದೇಶಗಳಲ್ಲಿ ಪ್ರವಾಸಿಗಳ ಜೊತೆ, ಅದರಲ್ಲೂ ಶ್ವೇತವರ್ಣೀಯರಲ್ಲದವರ ಜೊತೆ ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುವ ಹಠ ಹಿಡಿಯುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ನಾಲ್ಕನೆಯ ಬರಹ

Read More

ಮನಸ್ಸಿನ ಮಾರ್ಗದಲ್ಲೊಂದು ವೈಚಾರಿಕ ರಾಗಾಲಾಪಗಳು: ರಾಮ್ ಪ್ರಕಾಶ್ ರೈ ಕೆ ಸರಣಿ

ಚಿತ್ರದ ಕಟ್ಟುವಿಕೆ ವಿಶೇಷವೆನಿಸಿಕೊಳ್ಳುವುದು ಪಿ. ವಾಸು ಆಯ್ದುಕೊಳ್ಳುವ ಕಥಾವಸ್ತು ಹಾಗೂ ಅದರ ಮೌಲ್ಯದ ಕಾರಣಕ್ಕೆ. ಅವರ ಆಪ್ತಮಿತ್ರ, ಆಪ್ತ ರಕ್ಷಕ, ಶಿವಲಿಂಗ ಹಾಗೂ ಆಯುಷ್ಮಾನ್‌ಭವ ಚಿತ್ರಗಳೆಲ್ಲವೋ ಮನೋ ವೈಜ್ಞಾನಿಕ ಅಂಶಗಳನ್ನು ಆಧರಿಸಿದವೇ ಆಗಿವೆ ಹಾಗೂ ಸಂಗೀತದ ಬಳಕೆಯೂ ಅತೀ ವಿಶೇಷವಾಗಿರುವಂಥದ್ದು. ಇಲ್ಲಿ ಚಿತ್ರದ ಅಭೂತ ಪೂರ್ವ ವಿಜಯಕ್ಕೆ ಇನ್ನೊಂದು ಕಾರಣವೆಂದರೆ ತಾರಾಗಣ. ವಿಜಯ್ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಮೋಘ ಅಭಿವ್ಯಕ್ತಿ..
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಪಿ. ವಾಸು ನಿರ್ದೇಶನದ ‘ಆಪ್ತಮಿತ್ರ’ ಸಿನಿಮಾದ ವಿಶ್ಲೇಷಣೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ