Advertisement

Month: January 2025

“ಹೊಸ ಸರಳತೆ”ಯ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಲೊವೀನಿಯಾ ದೇಶದ ಕವಿ ಪೀಟರ್ ಸೆಮೊಲಿಕ್-ರವರ (Peter Semolič) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ

ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ “ಕರಕಲಾದ ಅನ್ನದಗುಳು” ನಿಮ್ಮ ಓದಿಗೆ

Read More

ಕೋಟಿ ಸೈಕಲ್, ಎರಡು ರೈಲ್ವೆ ನಿಲ್ದಾಣ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಎಂಟನೆಯ ಬರಹ

Read More

ಕಳೆದ ನೆನಪಿನ ಬಾನಿನ ಮೇಲಿನ ಮಿನುಗುವ ಭಾವಲೋಕ: ರಾಮ್ ಪ್ರಕಾಶ್ ರೈ ಕೆ ಸರಣಿ

ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮೆಯ್ಯಳಗನ್’ ಸಿನಿಮಾದ ವಿಶ್ಲೇಷಣೆ

Read More

ಬ್ರಸೆಲ್ಸ್‌ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು.
ಯೂರೋಪ್‌ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ