Advertisement

Month: January 2025

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ

‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ.
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಸುಳಿಹೊಳೆ ಕಥಾಧಾಮ” ನಿಮ್ಮ ಓದಿಗೆ

Read More

ಲೆಕ್ಕಕ್ಕೆ ಸಿಗದ ೨೦೨೪ ಏಳು-ಬೀಳುಗಳು: ವಿನತೆ ಶರ್ಮ ಅಂಕಣ

ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ನೆದರ್‌ಲ್ಯಾಂಡ್ಸ್ ಸಂಕೀರ್ಣತೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

Read More

ನಮ್‌ ಸೈಟ್‌ ಎಲ್ಲಿದೆ! : ಎಚ್. ಗೋಪಾಲಕೃಷ್ಣ ಸರಣಿಯ ಐವತ್ತನೆಯ ಕಂತು!

ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ