Advertisement

Month: January 2025

ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ

Read More

ಮಹಾರಾಜಾ ಕಾಲೇಜಿನ ಮಧುರ ನೆನಪು ……: ಮೂರ್ತಿ ದೇರಾಜೆ ಬರಹ

ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ.
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ

Read More

ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

Read More

ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ

ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ