Advertisement

Month: January 2025

ಕವಿ ಒಬ್ಬ ಎಂಜಿನಿಯರ್;‌ ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999) ಕಾವ್ಯದ ಕುರಿತ ಬರಹ

Read More

ನಮ್ಮ ಭೂಮಿಗೆ ಈ ಪುಟ್ಟ ಕಾಣಿಕೆಯನ್ನಾದರೂ ಕೊಡೋಣ..: ಬಿ.ಸಂ.ಸುವರ್ಚಲಾ ಬರಹ

ಹೆಚ್ಚಿನವರ ಕೈಯಲ್ಲಿ ಇಂದು ದುಡ್ಡು ಸುಲಭವಾಗಿ ಓಡಾಡುತ್ತಿದೆ. ಅದಕ್ಕೆ ತಕ್ಕನಾಗಿ ಆಸ್ತಿ, ಅಂತಸ್ತುಗಳು, ಬಳಸುವ ವಸ್ತುಗಳು ಇರಬೇಕೆಂದು ಬಯಸುವವರೇ ಹೆಚ್ಚು. ಪಟ್ಟಣಗಳು, ಮಾಲ್ ಸಂಸ್ಕೃತಿಗಳು ಜನರ ಕೊಳ್ಳುಬಾಕತನವನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಇತರರಿಂದ ಪ್ರಭಾವಕ್ಕೊಳಗಾಗುವ ಅನೇಕರು ಇತರರಂತೆ ನಾವೂ ಇರಬೇಕೆನ್ನುತ್ತಾ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಕೊಳ್ಳುತ್ತಾ ಜೀವನ ಸವೆಸುತ್ತಿದ್ದಾರೆ. ಹೊಸವರ್ಷದ ಹೊಸ್ತಿಲಲ್ಲಿ ನಾವೀಗ ಇದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡರೆ, ಒಂದಷ್ಟು ನಮ್ಮ ಅಗತ್ಯತೆ, ಅನಗತ್ಯತೆಗಳನ್ನು ಅರ್ಥ ಮಾಡಿಕೊಂಡರೆ, ಸಹಜ-ಸರಳವಾಗಿ, ಪರಿಸರಕ್ಕೆ ಪೂರಕವಾಗಿ, ಸುಸ್ಥಿರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.
ಪರಿಸರ ಕಾಳಜಿಯ ಕುರಿತು ಬಿ.ಸಂ.ಸುವರ್ಚಲಾ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನಂದಾ ಪ್ರಕಾಶ ಕಡಮೆ ಕತೆ

ವಿಶ್ವನಾಥನಿಗೆ ಸಹನೆಯ ಕಟ್ಟೆಯೊಡಯತೊಡಗಿತ್ತು. ‘ನೀವು ನಮ್ಮನ್ನು ಕರೆಸಿದ್ದು ನಿಮ್ಮ ಫೋನ್ ನಂಬರಿಗೆ ಲಾಟರಿ ಹತ್ತಿದೆ, ಬಹುಮಾನ ಗಳಿಸಿದ್ದೀರಿ ಬನ್ನಿ ಅಂತ, ಸುಮ್ಮನೇ ನಮ್ಮ ಬಹುಮಾನ ನಮಗೆ ಕೊಟ್ಟು ನಂತರ ಮಾತಾಡಿ, ನಾವು ನಮ್ಮ ಕೆಲಸ ಬೊಗಸೆ ಎಲ್ಲ ಬಿಟ್ಟು ಇಲ್ಲಿ ಬಂದಿದ್ದೇವೆ, ಕಂಪ್ಲೆಂಟು ಕೊಡ್ತೇನೆ ಕಂಪ್ಲೆಂಟು’ ಅಂತ ಎದ್ದು ನಿಂತು ದೊಡ್ಡ ದನಿಯಲ್ಲಿ ಕೂಗಾಡತೊಡಗಿದ್ದೇ, ಅಲ್ಲಿಯ ವ್ಯವಸ್ಥಾಪಕರು ಕಸಿವಿಸಿಗೊಂಡರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನಂದಾ ಪ್ರಕಾಶ ಕಡಮೆ ಕತೆ “ನೀರ ಮಣಿಗಳ ಮಾಲೆ”

Read More

ಹಸಿರು ಪುಕ್ಕ: ಡಾ. ಅಶ್ವಥ ಕೆ.ಎನ್.‌ ಪುಸ್ತಕದ ಒಂದು ಬರಹ

ಪರದೆಯ ಹಿಂದೆ ಆಲದಮರದಿಂದ ಯಾವುದೋ ಭೂತವೋ! ಪಿಶಾಚಿಯೋ! ಪರ್… ಎನ್ನುತ್ತಾ ಜೋರಾಗಿ ಪಂಚೆಗೆ ಬಡಿಯಿತು. ಆ ಪಂಚೆ ನಮ್ಮಿಬ್ಬರ ಮುಖಕ್ಕೆ ಬಡಿದು, ಪಂಚೆಯ ಮೇಲೆ ಕುಳಿತಿದ್ದ ಪತಂಗ, ಹುಳ-ಹುಪ್ಪಟಗಳೆಲ್ಲ ಮೈಮೇಲೆ ಬಿದ್ದವು. ಅಮಾವಾಸ್ಯೆ ಮಧ್ಯರಾತ್ರಿಯ ಆ ಕಗ್ಗತ್ತಲಲ್ಲಿ ನಮ್ಮನ್ನೇ ಬೀಳಿಸುವಂತೆ ಬಂದ ಆ ಅನಿರೀಕ್ಷಿತ ಜೀವಿಯಿಂದ ಹೆದರಿ ಇನ್ನೇನು ಕಾಲಿಗೆ ಬುದ್ದಿ ಹೇಳಬೇಕು; ಅಷ್ಟರಲ್ಲಿ, ಪಂಚೆಯ ಪಕ್ಕದಲ್ಲೇ ನಮ್ಮಿಬ್ಬರ ನಡುವೆಯೇ ಹಸಿರು ಬಣ್ಣದ ಹಕ್ಕಿಯೊಂದು ಹಾರಿ ಹೋಯಿತು.
ಡಾ. ಅಶ್ವಥ ಕೆ.ಎನ್.‌ ಬರೆದ ಹಕ್ಕಿಲೋಕದ ಕತೆಗಳ ಕೃತಿ “ಜಂಗಾಲ”ದ ಒಂದು ಬರಹ ನಿಮ್ಮ ಓದಿಗೆ

Read More

ದಾರಿ ತಪ್ಪಿದ ಪ್ರೀತಿ ಬದುಕು ಕಟ್ಟಿಕೊಳ್ಳುವುದನ್ನು ತಪ್ಪಿಸುವುದೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ