Advertisement
ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

ಒಂದು ಸ್ತನದ ಹುಡುಗಿ

ಬಸ್ ನಿಲ್ದಾಣದ ಮೂಲೆಗೆ ಕುಳಿತ
ಅವಳ ಕುಡಿನೋಟ
ಚಪ್ಪಟೆ ಮೂಗು, ಸಮಾಸಮ ಎತ್ತರ
ಕಣ್ಣ ತುಂಬ ಪ್ರಶ್ನೆ
ತುಟಿಯಲ್ಲಿ ಮಿಂಚು ನಗೆ

ಬಳ್ಳಿಯಂಥ ಈ ಚೀನಿ ಹುಡುಗಿ
ಒಮ್ಮೆಲೆ ಪರಿಚಯವಾಗಿ
ಕೈಕೈ ಹಿಡಿದು ಊರೆಲ್ಲ ಮರೆತಾಗ
ಬದುಕಿಗೊಂದು ಸ್ಪೂರ್ತಿ
ಒಬ್ಬರನ್ನೊಬ್ಬರು ಬಿಸಿಹಿಡಿದು, ಕಾಡು ಸುತ್ತಿ
ಕಣಿವೆಯೆಲ್ಲ ಅಲೆದಲೆದು
ಬಯಲ ಹುಲ್ಲುಗಾವಲಲ್ಲಿ
ಅಪ್ಪಿ ಕೂತಾಗ
ನನ್ನ ಅವಳ ಮಧ್ಯೆ
ಬಿಸಿ ಉಸಿರು
ಅವಳ ಎದೆಯಲ್ಲಿ ಒಂಟಿ ಸ್ತನ!

ಜೀವನವ, ಪ್ರೀತಿಯ
ಬಸಿ ಬಸಿದು ಕುಡಿಸಿದವಳೆ
ಪ್ರಶ್ನೆಗಳೇ ಏಳದಂಥ ಉತ್ತರಗಳ ಕೊಟ್ಟವಳೆ
ಈವತ್ತಿನ ಬೆಳಗು ನೀನಿಲ್ಲ!

ಗುಡ್ಡದ ಮೇಲಿನ ಭೌದ್ದ ರುದ್ರಭೂಮಿಯ ಥಂಡಿ
ನಿನ್ನ ಬಿಸಿ ತುಟಿಗಳಿಗೆ ತಾಗದಿರಲಿ.
ಕೆಳಗಿನ ಕಣಿವೆಯ ಸಮುದ್ರದ ಅಲೆಗಳ ಮೊರೆತ
ನಿನ್ನ ಕಿವಿಗಳಿಗೆ ಕವಿತೆಗಳಾಗಿ ಉಲಿಯಲಿ.

About The Author

ನರೇಂದ್ರ ಶಿವನಗೆರೆ

ವೃತ್ತಿಯಲ್ಲಿ ವಿಜ್ಞಾನದ ಮೇಸ್ಟ್ರು, ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ. ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ