Advertisement
ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.
ಶೋಭಾ ನಾಯಕ ಅನುವಾದಿಸಿದ ಹಿಂದಿ ಕವಿ ಗೋಬಿಂದ ಪ್ರಸಾದರ ಆಯ್ದ ಪದ್ಯಗಳ ‘ವರ್ತಮಾನದ ಧೂಳುʼ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

 

ಸಮಕಾಲೀನ ಹಿಂದಿ ಸಾಹಿತ್ಯದಲ್ಲಿ ಡಾ. ಗೋಬಿಂದ ಪ್ರಸಾದರಿಗೆ ಮುಖ್ಯವಾದ ಒಂದು ಸ್ಥಾನವಿದೆ. ಅವರು ಕವಿತೆಯನ್ನು ಕಟ್ಟುವ ವಿಧಾನಕ್ಕೆ ಹಿಂದಿ ವಿಮರ್ಶಕರು ಮಾರು ಹೋಗಿದ್ದಾರೆ. ಅವರ ಕವಿತೆಗಳು ಓದುಗರಿಗೆ ಪ್ರೇರಣೆ ನೀಡುವುದರ ಜೊತೆಗೆ ಅವರನ್ನು ಇನ್ನಷ್ಟು ಸಂವೇದನಾಶೀಲರನ್ನಾಗಿಸುವ ಪ್ರಕ್ರಿಯೆಗೆ ಹಿಂದಿ ಓದುಗ ವಲಯ ತನ್ನ ತೃಪ್ತಿಯನ್ನೂ ಪ್ರಕಟಿಸಿದೆ. ಕಾವ್ಯಜನ್ಯ ರಾಜಕೀಯವನ್ನು ಶಕ್ತಿ ರಾಜಕಾರಣದಿಂದ ಬೇರ್ಪಡಿಸಿ ಬರೆಯುವ ಗೋಬಿಂದ ಪ್ರಸಾದರ ಕವಿತೆಗಳ ಸೌಂದರ್ಯವನ್ನು ಈ ಸಂಕಲನದಲ್ಲಿರುವ ಹೆಚ್ಚಿನ ಎಲ್ಲಾ ಕವಿತೆಗಳಲ್ಲಿಯೂ ಕಾಣಬಹುದು.

(ಗೋಬಿಂದ ಪ್ರಸಾದ್)

ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.

ಅನೇಕ ವರ್ಷಗಳಿಂದ ಗೋಬಿಂದ ಪ್ರಸಾದರು ವೈಯಕ್ತಿಕವಾಗಿ ನನಗೆ ಗೊತ್ತು. ಅವರ ತರಗತಿಗಳಲ್ಲಿ ಕುಳಿತು ನಾನು ಪಾಠ ಕೇಳಿದ್ದೇನೆ. ಚಹಾ ಕುಡಿಯುತ್ತಾ ಸಾಕಷ್ಟು ಹರಟಿದ್ದೇನೆ. ಜೆ ಎನ್ ಯು ಮತ್ತು ಜಂತರ್ ಮಂತರ್ ಗಳಲ್ಲಿ ನಡೆವ ಹೋರಾಟಗಳಲ್ಲಿ ನಾವಿಬ್ಬರೂ ಜೊತೆಯಾಗಿಯೇ ಭಾಗವಹಿಸಿದ್ದೇವೆ. ಆ ಎಲ್ಲಾ ಸಂದರ್ಭಗಳಲ್ಲೂ ಅವರು ಕವಿತೆ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತಾಡಿದ್ದು ನನಗೆ ಗೊತ್ತಿಲ್ಲ.

(ಶೋಭಾ ನಾಯಕ)

ಸಂಕಲನದ ಎರಡು ಕವಿತೆಗಳು…

ಆಧುನಿಕ ಭಾರತವಾಸಿ

ನಾನು ಆಧುನಿಕ ಭಾರತವಾಸಿ
ಕೂಡುವುದು ಕಳೆಯುವುದು
ಉದುರಿದ ಹೂವುಗಳನ್ನು ಆರಿಸುವುದು
ವಿಚಾರಗಳ ಬಟ್ಟೆಯನ್ನು
ಹೊದ್ದು-ತೆಗೆದು
ದಾರಿಯನ್ನು ಕಾಯುತ್ತಾ ಕುಡುವುದು
ನಾನು ಆಧುನಿಕ ಭಾರತವಾಸಿ
ಎಂಜಲು ನೆಕ್ಕುತ್ತಾ
ಕೂಡುವುದು ಕಳೆಯುವುದು

2. ನಾನೇ ನನ್ನ ಸುತ್ತಲೂ

ಹೀಗೆ ಕಲ್ಲಿನಂತಾಗಿ ಕೂತಿರುವೆ ನಾನೇ ನನ್ನ ಸುತ್ತಲೂ
ಎಲ್ಲೋ ನಿಟ್ಟಿಸುವೆ ಏನನೊ ನೋಡಿಯೂ ನೋಡದಂತೆ
ನಾನೇ ನನ್ನ ಸುತ್ತಲೂ
ಮನದ ಶೂನ್ಯಾಕಾಶದಲಿ ತಿರುಗುತಿದೆ ಸಂಜೆ ಎಂಟರ ಜಾವ
ಖಿನ್ನವಾಗಿ ಒಂಟಿ ಹಕ್ಕಿಯೊಂದು ಸದಾ ಅಲೆಯುತಿರುವಂತೆ
ನಾನೇ ನನ್ನ ಸುತ್ತಲೂ
ಅನುಭವದ ಈ ಹಾದಿಯಲಿ ಅನಾದಿಯಿಂದ ಹುಡುಕುತಿರುವೆ
ಜಗವನೇ ಕವಿತೆಯಾಗಿಸುವ ಅಕ್ಷರದ ಅಣಿ ಮುತ್ತುಗಳಿಗಾಗಿ
ನಾನೇ ನನ್ನ ಸುತ್ತಲೂ
ಮನಸಂತೂ ಅಲ್ಲಿಯೇ ಕೂತುಬಿಟ್ಟಿದೆ ಅದೇ ಹಳೆ ದಿಲ್ಲಿಯಲಿ
ಸೋಫಿಯಾಳ ಮೂಕ ರಸ್ತೆಯಲಿ ಹಿಮ ಹೊದ್ದು ತಿರುಗುತಿರುವೆ
ನಾನೇ ನನ್ನ ಸುತ್ತಲೂ

 

(ಕೃತಿ: ವರ್ತಮಾನದ ಧೂಳು (ಅನುವಾದಿತ ಕವನ ಸಂಕಲನ), ಮೂಲ: ಗೋಬಿಂದ ಪ್ರಸಾದ್‌, ಅನುವಾದ: ಶೋಭಾ ನಾಯಕ, ಪ್ರಕಾಶಕರು: ಸಂಕಥನ, ಬೆಲೆ: 100/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ