Advertisement
ಹಾಲ್ದೊಡ್ಡೇರಿ ತೀರಿಹೋದರು…

ಹಾಲ್ದೊಡ್ಡೇರಿ ತೀರಿಹೋದರು…

ಕನ್ನಡದ ಅಗ್ರಗಣ್ಯ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇಂದು ನಿಧನರಾಗಿದ್ದಾರೆ. ವಿಜ್ಞಾನದಷ್ಟೇ ಬರವಣಿಗೆಯನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಸುಧೀಂದ್ರ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರಕಟಿಸಿತ್ತು. ಆದರೆ ಪ್ರಶಸ್ತಿಯ ಸಂಭ್ರಮಕ್ಕೆ ಕಾಯದೇ ಅವರು ತೆರಳಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಹಾಲ್ದೊಡ್ಡೇರಿ ಅವರ ಮೂಲ ಊರಾಗಿದ್ದರು, ಅವರು ಬೆಂಗಳೂರು ನಿವಾಸಿಯೇ ಆಗಿದ್ದರು. ಎಚ್ಎಎಲ್ ನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ ಹಾಲ್ದೊಡ್ಡೇರಿ ಅವರು, ಜಾಗ್ವಾರ್, ಕಿರಣ್, ಚೀತಾ, ಸೀ ಕಿಂಗ್ ಹೆಲಿಕಾಪ್ಟರ್ ಗಳ ಎಂಜಿನ್ ರೂಪಿಸುವ ಕೆಲಸಕ್ಕೆ ಕೊಡುಗೆ ನೀಡಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ಅವರು ಹೊಸತಲೆಮಾರಿನ ಆಸಕ್ತರ ಜೊತೆಗೆ ಹಂಚಿಕೊಳ್ಳಬಯಸಿದ್ದರು. ಹಾಗಾಗಿ ನಿವೃತ್ತಿಯ ಜೀವನವನ್ನು ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಉಪನ್ಯಾಸಕ್ಕೆ ಮೀಸಲಿಟ್ಟಿದ್ದರು. ಜೈನ್ ವಿಶ್ವವಿದ್ಯಾಲಯ ಮತ್ತು ಅಲೆಯನ್ಸ್ ವಿಶ್ವವಿದ್ಯಾಲಯಗಳಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್ ಪಾಠ ಮಾಡುತ್ತಿದ್ದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ ಸಾಮಾನ್ಯರೂ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಆಶಯದಿಂದ ಅವರು ಪತ್ರಿಕೆಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ವಿಜ್ಞಾನದ ವಿಷಯಗಳನ್ನು ಸರಳವಾಗಿ ವಿವರಿಸುತ್ತಿದ್ದರು. ಸುಕ್ಷೀರಸಾಗರ, ಸುಹಾನಾ (ಸುಧೀಂದ್ರ ಹಾಲ್ದೊಡ್ಡೇರಿ ನಾಗೇಶರಾವ್); ಹಾನಾಸು, ಸುಮಾಪತಿ ಎಂಬ ಹೆಸರಿನಲ್ಲಿ ಬರಹಗಳನ್ನು ನಿರಂತರವಾಗಿ ಬರೆಯುತ್ತಿದ್ದರು. ವೈಜ್ಞಾನಿಕ ಮಾಹಿತಿಯು ಜನರಿಗೆ ಅರ್ಥವಾಗುವ ಶೈಲಿಯಲ್ಲಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಬರವಣಿಗೆಯನ್ನು ಹೆಚ್ಚು ಪ್ರೀತಿಸಿದ್ದರು.

ಲೋಕಶಿಕ್ಷಣ ಟ್ರಸ್ಟ್ ನ ಕಸ್ತೂರಿ ಮಾಸಪತ್ರಿಕೆಯಲ್ಲಿ ‘ನವನವೋನ್ಮೇಷ’ ಶೀರ್ಷಿಕೆಯ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ‘ಸೈನ್ಸ್ ಕ್ಲಾಸ್’ ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ನೆಟ್ ನೋಟ’ ಶೀರ್ಷಿಕೆಯ ಅಂಕಣಕಾರರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರೂ ಆಗಿದ್ದರು. ‘ಸದ್ದು! ಸಂಶೋಧನೆ ನಡೆಯುತ್ತಿದೆ’, ‘ಬಾಹ್ಯಾಕಾಶವೆಂಬ ಬೆರಗಿನಂಗಳ’, ‘ಬೆರಗಿನ ಬೆಳಕಿಂಡಿ’ (ಲೇಖನಗಳ ಸಂಗ್ರಹ ಕೃತಿ), ‘ವಿಜ್ಞಾನ ಮತ್ತು ಪತ್ರಿಕೋದ್ಯಮ’ ಅವರು ಬರೆದ ಕೃತಿಗಳು.

ಹಲವಾರು ಪುರಸ್ಕಾರಗಳೂ ಅವರನ್ನು ಅರಸಿಕೊಂಡು ಬಂದಿವೆ. ರಾಷ್ಟ್ರೀಯ ವಿಜ್ಞಾನ ದಿನ (2002) ಪದಕ, ಉತ್ತಮ ತಂತ್ರಜ್ಞಾನ ಕಾರ್ಯಪಡೆ (2004 ಹಾಗೂ 2005) ಪ್ರಶಸ್ತಿ, ಕರ್ನಾಟಕ ಸರ್ಕಾರದ ವಿಜನ್ ಗ್ರೂಪ್ ಆನ್ ಸೈನ್ಸ್ ಆಂಡ್ ಟೆಕ್ನಾಲಜಿಯಿಂದ (2010) ಶ್ರೇಷ್ಠ ವಿಜ್ಞಾನ ಸಂವಹನಕಾರ ಪುರಸ್ಕಾರ, ಕನ್ನಡ ವಿಜ್ಞಾನ ಪರಿಷತ್ತಿನಿಂದ (2007) ರಜತೋತ್ಸವ ಪುರಸ್ಕಾರಗಳು ಅವರಿಗೆ ಸಂದಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Krishna swamy m b

    ?? ಓಂ ಶಾಂತಿ ??

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ